ಹಾವೇರಿ:ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ನಿನ್ನೆ ವಿವಿಧೆಡೆ ಬಿರುಗಾಳಿ ಸಹಿತ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ.
ಹಾವೇರಿಯಲ್ಲಿ ನಿಲ್ಲದ ಮಳೆ: ಗಾಳಿಗೆ ಹಾರಿ ಹೋದ ಮನೆ ಮೇಲ್ಛಾವಣಿಗಳು - undefined
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಗಾಳಿ ಸಹಿತ ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.
ಗಾಳಿಗೆ ಹಾರಿ ಹೋದ ಮನೆ ಮೇಲ್ಚಾವಣಿ
ಜಿಲ್ಲೆಯ ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವರ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಅಲ್ಲದೆ ಮರದ ರಂಬೆಗಳು ನೆಲಕ್ಕುರುಳಿರುವ ಘಟನೆಗಳು ನಡೆದಿವೆ.