ಹಾವೇರಿ:ತುಂಗಭದ್ರಾ ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ಜಮೀನಿನ ಮರದಲ್ಲಿದ್ದ ಮಂಗಗಳು ದಾರಿ ಕಾಣದೆ ಮರದಲ್ಲಿ ಕೂತಿರೋ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ.
ಮಂಗಗಳಿಗೂ ಮಾರಕವಾದ ತುಂಗಭದ್ರಾ ನದಿ ನೀರು... ಗ್ರಾಮಸ್ಥರಿಂದ ಆಹಾರ ಪೂರೈಕೆ
ಜಿಲ್ಲೆಯಲ್ಲಿ ತುಂಗಭದ್ರಾ ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ಹತ್ತಕ್ಕೂ ಅಧಿಕ ಮಂಗಗಳು ದಿಕ್ಕು ತೋಚದೆ ಮರದಲ್ಲೇ ಕುಳಿತಿವೆ. ಇದರಿಂದ ಮರುಕಪಟ್ಟ ಗ್ರಾಮಸ್ಥರು ದೋಣಿಯಲ್ಲಿ ತೆರಳಿ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.
ಕಪಿರಾಯನಿಗೆ ಆಹಾರ ನೀಡುತ್ತಿರುವ ರೈತರು
ಕಳೆದ ಕೆಲವು ದಿನಗಳಿಂದ ಗ್ರಾಮದ ರೈತರ ಜಮೀನಿನಲ್ಲಿರೋ ಮರಗಳಲ್ಲಿ ಮಂಗಗಳು ಓಡಾಡಿಕೊಂಡಿದ್ದವು. ಆದ್ರೆ ತುಂಗಭದ್ರಾ ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ಹತ್ತಕ್ಕೂ ಅಧಿಕ ಮಂಗಗಳು ದಿಕ್ಕು ತೋಚದೆ ಮರದಲ್ಲೇ ಕುಳಿತಿವೆ. ಮರದಲ್ಲಿದ್ದ ಮಂಗಗಳನ್ನ ಕಂಡ ಗ್ರಾಮಸ್ಥರು ಮರುಕಪಟ್ಟು ದೋಣಿ ಮೂಲಕ ತೆರಳಿ ಮರವೇರಿ ಬಾಳೇಹಣ್ಣು ಸೇರಿದಂತೆ ವಿವಿಧ ರೀತಿಯ ತಿನಿಸುಗಳನ್ನ ಮಂಗಗಳಿಗೆ ಕೊಟ್ಟು ಬರ್ತಿದ್ದಾರೆ. ಇದರಿಂದ ಮಂಗಗಳು ನಿರ್ಭಯವಾಗಿವೆ.