ಕರ್ನಾಟಕ

karnataka

ETV Bharat / state

ಹಾವೇರಿ: ನವೀನ್​ ಕುಟುಂಬಸ್ಥರ ಆರೋಗ್ಯ ತಪಾಸಣೆ ವೇಳೆ ಕಣ್ಣೀರು ಹಾಕಿದ ನರ್ಸ್​ - Ukraine Russia war

ನವೀನ್​ ಅವರ ನಿವಾಸಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ಕೊಟ್ಟು, ಕುಟುಂಬಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್​ ವಿಜಯಲಕ್ಷ್ಮಿ ಅವರು ನವೀನ್​​ರನ್ನು ನೆನಪಿಸಿಕೊಂಡು ದುಃಖಿತರಾದರು.

health officer gave information about health condition of naveen family members
ನವೀನ್​ ಕುಟುಂಬಸ್ಥರ ಆರೋಗ್ಯ ತಪಾಸಣೆ

By

Published : Mar 3, 2022, 1:04 PM IST

Updated : Mar 3, 2022, 1:13 PM IST

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ನವೀನ್ ಅವರ​ ಪಾರ್ಥಿವ ಶರೀರ ಬರೋದನ್ನು ಎದುರು ನೋಡುತ್ತಿದ್ದಾರೆ ಕುಟುಂಬಸ್ಥರು. ಇತ್ತ ಮೃತ ನವೀನ್​ ತಂದೆ, ತಾಯಿ ಮತ್ತು ಅಣ್ಣನ ಆರೋಗ್ಯ ತಪಾಸಣೆ ನಡೆಸಲಾಗಿದೆ.

ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ಅವರ ನಿವಾಸಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ಕೊಟ್ಟು, ಕುಟುಂಬಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್​ ವಿಜಯಲಕ್ಷ್ಮಿ ಅವರು ನವೀನ್​​ರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ಆರೋಗ್ಯ ತಪಾಸಣೆ ನಂತರ ಮಾತನಾಡಿದ ನರ್ಸ್​, ನವೀನ್​ ಕುಟುಂಬದ ಮೂವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಮೂವರ ಆರೋಗ್ಯ ನಾರ್ಮಲ್ ಆಗಿದೆ. ಸಾವಿನ ಸುದ್ದಿಯಿಂದ ಯಾರಿಗಾದ್ರೂ ಆಘಾತ ಆಗೋದು ಸಾಮಾನ್ಯ. ನನಗೂ ಸಹ ನವೀನ್​ ಸಾವಿನಿಂದ ಆಘಾತವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನವೀನ್​ ಕುಟುಂಬಸ್ಥರ ಆರೋಗ್ಯ ತಪಾಸಣೆ

ಇದನ್ನೂ ಓದಿ:ಉಕ್ರೇನ್​ನಲ್ಲಿ ಮೃತಪಟ್ಟ ನವೀನ್.. ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ: ಆದರೆ ಮೃತದೇಹ ಬರೋದ್ಯಾವಾಗ?

ನಾನೂ ಕೂಡ ಎರಡ್ಮೂರು ಬಾರಿ ನವೀನ್​​ನನ್ನು ಭೇಟಿ ಆಗಿದ್ದೆ. ಲಾಕ್​ಡೌನ್ ಸಮಯದಲ್ಲಿ ನವೀನ್​ ಬಂದಿದ್ದ. ನಾನು ನಿವೃತ್ತಿ ನಂತರ ನಿನ್ನ ಆಸ್ಪತ್ರೆಗೆ ಬಂದು ನರ್ಸ್ ಆಗಿ ಕೆಲಸ ಮಾಡುತ್ತೇನೆ, ನೇಮಕ ಮಾಡಿಕೊಳ್ತೀಯಾ ಅಂತ ಜೋಕ್ ಮಾಡಿದ್ದೆ. ನಾನು ಡ್ಯೂಟಿಯಲ್ಲಿದ್ದಾಗ ತಂದೆ-ಮಗ ನವೀನ್​​ ಜೊತೆ ಮಾತನಾಡಿದ್ರು. ಅವನನ್ನು ಯಾಕೆ ಕರೆಸಿಲ್ಲ ಅಂತಾ ಅವರ ತಂದೆ ಬಳಿ ಕೇಳಿದ್ದೆ. ಯುದ್ಧ ನಡೆಯೋ ಸ್ಥಳದಿಂದ ನವೀನ್​ ದೂರ ಇದ್ದಾನಮ್ಮ, ಸೇಫ್ ಆಗಿದ್ದಾನೆ ಅಂತಾ ಅವರ ತಂದೆ ಹೇಳಿದ್ದರು. ಅದೇ ದಿನ ಮಧ್ಯಾಹ್ನವೇ ಸಾವಿನ ಸುದ್ದಿ ಬಂತು. ಸಾವಿನ ಸುದ್ದಿ ಕೇಳಿ ನನಗೂ ದುಃಖವಾಯಿತು ಎಂದು ಕಣ್ಣೀರಿಟ್ಟರು.

Last Updated : Mar 3, 2022, 1:13 PM IST

ABOUT THE AUTHOR

...view details