ಕರ್ನಾಟಕ

karnataka

ETV Bharat / state

ಹಾವೇರಿ: ಮುಷ್ಕರ ಹೂಡಿದ ಆರೋಗ್ಯ ಇಲಾಖೆ ಗುತ್ತಿಗೆ - ಹೊರಗುತ್ತಿಗೆ ನೌಕರರ ವಜಾ - ಅನಿರ್ಧಿಷ್ಟ ಮುಷ್ಕರ ಮಾಡಿದ ನೌಕರರು

ಸಾರ್ವಜನಿಕರ ಆರೋಗ್ಯ ಸೇವೆ ಮಾಡಬೇಕಾದ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ತೊಂದರೆಯನ್ನುಂಟು ಮಾಡಿ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ತುರ್ತು ಸಭೆ ನಡೆಸಿ, ಮುಷ್ಕರದಲ್ಲಿ ಭಾಗಿಯಾಗಿರುವ ನೌಕರರನ್ನು ವಜಾ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ.

health-department-leasing-and-outsourcing-employees-fired
ನೌಕರರು ವಜಾ

By

Published : Oct 6, 2020, 5:32 PM IST

ಹಾವೇರಿ (ರಾಣೆಬೆನ್ನೂರು) : ಸಮಾನ ವೇತನ ಮತ್ತು ಸಮಾನ ಕೆಲಸ ಹಾಗೂ ಸೇವಾ ಭದ್ರತೆಗಾಗಿ ಮುಷ್ಕರ ನಡೆಸಿದ್ದ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ವಜಾ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮುಂದಾಗಿದ್ದಾರೆ.

ಹಾವೇರಿ ಜಿಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸೆ.24 ರಿಂದ ಅ.06 ರವರಗೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು. ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ಸಾರ್ವಜನಿಕರ ಆರೋಗ್ಯ ಸೇವೆ ಮಾಡಬೇಕಾದ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ತೊಂದರೆಯನ್ನುಂಟು ಮಾಡಿ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ತುರ್ತು ಸಭೆ ನಡೆಸಿ, ಮುಷ್ಕರದಲ್ಲಿ ಭಾಗಿಯಾಗಿರುವ ನೌಕರರನ್ನು ವಜಾ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ.

ನೌಕರರನ್ನು ವಜಾ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ
ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಕಷ್ಟದಲ್ಲಿ ನೌಕರರು:ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಈವರೆಗೂ ಸಮಾನ ವೇತನವನ್ನು ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಹೊರಗುತ್ತಿಗೆ ನೌಕರರ ರಾಜ್ಯಾಧ್ಯಕ್ಷರ ಹತ್ತಿರ ಮನವಿ‌ ಮಾಡಿಕೊಂಡಿದ್ದರು‌. ಇದರ ಹಿನ್ನೆಲೆ ಕಳೆದ ಹತ್ತು ದಿನದಿಂದ ಸೇವೆ ಬಿಟ್ಟು ಮುಷ್ಕರ ಮಾಡಿದ್ದರು. ಆದರೆ, ದಿಢೀರನೇ ಜಿಲ್ಲಾಡಳಿತ ಇವರನ್ನ ವಜಾಗೊಳಿಸುವುದು ಸರಿಯಲ್ಲ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details