ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ತಡೆಗೆ ಹಗಲಿರುಳು ಶ್ರಮಿಸುವವರಲ್ಲೊಬ್ಬರಾದ ಕೊರೊನಾ ವಾರಿಯರ್ ಮೃತಪಟ್ಟಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 51 ವರ್ಷದ ಹೆಡ್ ಕಾನ್ಸ್ಟೇಬಲ್ ಕೊರೊನಾಗೆ ಬಲಿಯಾಗಿದ್ದಾರೆ.
ಹಾವೇರಿ: ಸೋಂಕಿಗೆ ಕೊರೊನಾ ವಾರಿಯರ್ ಬಲಿ - ಹೆಡ್ ಕಾನ್ಸ್ ಟೇಬಲ್ ಕೊರೊನಾಗೆ ಬಲಿ
ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ತಮ್ಮ ಜೀವ ಒತ್ತೆ ಇಟ್ಟು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವವರಲ್ಲೊಬ್ಬರಾದ ಹೆಡ್ ಕಾನ್ಸ್ಟೇಬಲ್ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ಟೇಬಲ್ ರಜೆ ಮೇಲಿದ್ದರು. ರಜೆ ವಿಸ್ತರಣೆಗಾಗಿ ಇದೇ 23ರಂದು ಕಚೇರಿಗೆ ಬಂದಾಗ ಅವರ ಸ್ವ್ಯಾಬ್ ಪಡೆಯಲಾಗಿತ್ತು. ಅವರ ಸ್ವ್ಯಾಬ್ ಫಲಿತಾಂಶ 27ರಂದು ಬಂದಿದ್ದು ಸೋಂಕು ದೃಢಪಟ್ಟಿದೆ. ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಮಾಲೆ, ಶ್ವಾಸಕೋಶದ ತೊಂದರೆ ಮತ್ತು ಮೂತ್ರನಾಳದ ಇನ್ಫೆಕ್ಷನ್ನಿಂದ ಬಳಲುತ್ತಿದ್ದ ಅವರು, ಇಂದು ಮುಂಜಾನೆ ನಿಧನರಾಗಿದ್ದಾರೆ. ಇದರಿಂದಾಗಿ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಕೊರೊನಾ ವಾರಿಯರ್ ಬಲಿಯಾದಂತಾಗಿದೆ.