ಕರ್ನಾಟಕ

karnataka

ETV Bharat / state

ಮಿಂಚಿನ ಓಟ ನಿಲ್ಲಿಸಿದ 'ಹಾವೇರಿ ಡಾನ್'​: ಸೋಲಿಲ್ಲದ ಸರದಾರನ ಸಾವು, ಅಭಿಮಾನಿಗಳಲ್ಲಿ ಮಡುಗಟ್ಟಿತು ಶೋಕ..

'ಹಾವೇರಿ ಡಾನ್' ಈ ಹೆಸರು ಹೇಳಿದರೆ ಸಾಕು, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎಲ್ಲಾರು ತುದಿಗಾಲ ಮೇಲೆ ನಿಂತು ಈತನನ್ನು ನೋಡುತ್ತಿದ್ದರು. 15 ವರ್ಷಗಳ ಕಾಲ 'ಹಾವೇರಿ ಡಾನ್' ರಾಜ್ಯ ಮಾತ್ರವಲ್ಲದೆ ಅಂತಾರಾಜ್ಯದಲ್ಲೂ ತನ್ನದೇ ಆದ ಛಾಪು ಮೂಡಿಸಿತ್ತು. ಹೋದಲ್ಲೆಲ್ಲ ಜಯ, ಹಾವೇರಿ ಡಾನ್​​ದೇ ಹವಾ.. ಎಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ, 'ಹಾವೇರಿ ಡಾನ್' ಕೊನೆಯುಸಿರೆಳೆದಿದೆ..

haveri don
ಹಾವೇರಿ ಡಾನ್

By

Published : Jan 11, 2022, 7:23 PM IST

Updated : Jan 11, 2022, 8:21 PM IST

ಹಾವೇರಿ: ಕಾಲಿಟ್ಟ ಕಡೆಯಲ್ಲಾ ಜಯದ ಘೋಷಣೆ, ಶಿಳ್ಳೆ ಕೇಕೆಯ ಮಾರ್ಧನಿ.. ಸ್ಪರ್ಧೆಯಲ್ಲಿ ಜಯಭೇರಿಯಾಗಿ ಮಾಲೀಕನ ಮುಡಿಗೆ ಮೆಡಲ್​ ಅರ್ಪಿಸುವುದೇ ಇದರ ಗುರಿ.. ತನ್ನನ್ನು ಹಿಡಿಯಲು ಎದುರು ಬಂದವರ ಪಾಲಿಗೆ ಸಿಂಹಸ್ವಪ್ನ.

ಮಿಂಚಿನ ಓಟ ನಿಲ್ಲಿಸಿದ 'ಹಾವೇರಿ ಡಾನ್'​

ಹೌದು, ನಾವ್​ ಇಷ್ಟೆಲ್ಲ ಹೇಳ್ತಿರೋದು ಹಾವೇರಿ ಡಾನ್​ ಎಂದೇ ಖ್ಯಾತಿ ಪಡೆದಿದ್ದ ಜನತೆಯ ಅಚ್ಚುಮೆಚ್ಚಿನ ಹೋರಿ ಬಗ್ಗೆ.., ಜನರ ಮೆಚ್ಚುಗೆಯ ಈ ಡಾನ್​ ಇನ್ನು ನೆನಪು ಮಾತ್ರ.. ಈ ಮಾತನ್ನು ಕೇಳಿದ ಅಭಿಮಾನಿಗಳಲ್ಲಿ ಮಡುಗಟ್ಟುತ್ತೆ ಶೋಕ.

ಹಾವೇರಿ ಡಾನ್

ಮಂಗಳವಾರ ಡಾನ್​ ಹೆಸರಿನ ಹೋರಿ ಸಾವನ್ನಪ್ಪಿದ್ದು, ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ರಾಜ್ಯ ಸೇರಿದಂತೆ ತಮಿಳುನಾಡಿನಲ್ಲಿಯೂ ಡಾನ್​​ ತನ್ನದೇ ಆದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿತ್ತು ಎಂಬುದು ಇದರ ತಾಕತ್ತಿಗೆ ಸಾಕ್ಷಿಯಾಗಿತ್ತು.

ಸ್ಪರ್ಧೆಯಲ್ಲಿ ಗೆದ್ದ ಬಹುಮಾನಗಳ ಸಂಖ್ಯೆ 200ಕ್ಕೂ ಹೆಚ್ಚು​:

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾನ್ 19ನೇ ವಯಸ್ಸಿನಲ್ಲಿ ಅಸುನೀಗಿದೆ. ಇದು ರಾಜ್ಯ ಸೇರಿದಂತೆ ತಮಿಳುನಾಡಿನಲ್ಲಿಯೂ ಜನರ ಪ್ರೇಮ ಗಳಿಸಿತ್ತು. ಡಾನ್ ನಮ್ಮ ಹೆಸರನ್ನ ಎರಡು ರಾಜ್ಯಗಳಲ್ಲಿ ಜನಪ್ರಿಯಗೊಳಿಸಿತ್ತು. ಅದು​ 25 ಬೈಕ್, 50 ತೊಲೆ ಬಂಗಾರ, ಫ್ರಿಡ್ಜ್, ಅಲ್ಮೇರಾ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಬಹುಮಾನಗಳನ್ನು ಸ್ಪರ್ಧೆಯಲ್ಲಿ ಗೆದ್ದಿತ್ತು ಎನ್ನುತ್ತಾರೆ ಹೋರಿ​ ಮಾಲೀಕ..

ಹಾವೇರಿ ಡಾನ್

ಇದನ್ನೂ ಓದಿ: ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೋವಿಡ್​ ಕೇಸ್ ಪತ್ತೆ: ಶೇ.10 ದಾಟಿತು ಪಾಸಿಟಿವಿಟಿ ರೇಟ್, ಬೆಂಗಳೂರಿಗೆ ಆಘಾತ!

ಇಂದು ಮೃತಪಟ್ಟ ಡಾನ್​ನ ಪಾರ್ಥಿವ ಶರೀರವನ್ನು ಹಾವೇರಿಯ ಕುಳೇನೂರು ಗ್ರಾಮದಿಂದ ಮಾಲೀಕರ ಗೃಹಕ್ಕೆ ಟ್ರ್ಯಾಕ್ಟ್‌ರ್​ ಮೂಲಕ ಮೆರವಣಿಗೆ ನಡೆಸಲಾಯಿತು. ನಂತರ ಕಲ್ಲುಮಂಟಪ ರಸ್ತೆಯಲ್ಲಿ ಹಾವೇರಿ ಡಾನ್‌ನ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯ ಅಭಿಮಾನಿಗಳು ಸೇರಿದಂತೆ ತಮಿಳುನಾಡಿನ ಅಭಿಮಾನಿಗಳು ಸಹ ಡಾನ್ ಅಂತಿಮ ದರ್ಶನ ಪಡೆದರು.

ಹಾವೇರಿ ಡಾನ್

ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಕೆ:

ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧಿ ಪಡೆದಿದ್ದ ಡಾನ್ ಪಾರ್ಥಿವ ಶರೀರದ ಮುಂದೆ ಅಭಿಮಾನಿಗಳು ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ್ದು, ವಿಶೇಷವಾಗಿತ್ತು. ನಂತರ ಗುಡ್ಡದ ಮತ್ತಳ್ಳಿಯಲ್ಲಿನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆದ್ರೆ ಬಹುಮಾನಗಳ ಸರದಾರ ಡಾನ್​ ಯಾವಾಗಲೂ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿರುತ್ತಾನೆ ಎಂಬುದಂತೂ ಸತ್ಯ.

Last Updated : Jan 11, 2022, 8:21 PM IST

ABOUT THE AUTHOR

...view details