ಕರ್ನಾಟಕ

karnataka

ETV Bharat / state

ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ - ಉಕ್ರೇನ್​ನಲ್ಲಿ ಹಾವೇರಿ ವಿದ್ಯಾರ್ಥಿ ನವೀನ್​ ಸಾವು

ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆಯಾಗಿದೆ.

haveri-youth-naveen-dead-body-found
ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

By

Published : Mar 2, 2022, 10:51 AM IST

Updated : Mar 2, 2022, 12:31 PM IST

ಹಾವೇರಿ:ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್​ ಅಸುನೀಗಿದ್ದು, ಆತನ ಮೃತದೇಹವಿರುವ ವಿಡಿಯೋ ಲಭ್ಯವಾಗಿದೆ. ಹಾವೇರಿಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಉಕ್ರೇನ್​ನ ಖಾರ್ಕೀವ್​ನಲ್ಲಿ​ ರಷ್ಯಾ ದಾಳಿ ವೇಳೆ ಸಾವನ್ನಪ್ಪಿದ್ದಾನೆ.

ನವೀನ್ ಮೃತದೇಹದ ಫೋಟೋವನ್ನು ಉಕ್ರೇನ್​ನಲ್ಲಿ ಸಿಲುಕಿರುವ ಅವರ ಸ್ನೇಹಿತರಿಗೆ ಉಕ್ರೇನ್​​​ನ ಸ್ನೇಹಿತರಿಗೆ ಕಳುಹಿಸಿದ್ದರು. ಆ ವಿಡಿಯೋವನ್ನೇ ಮೃತ ನವೀನ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಹಾವೇರಿಯ ಯುವಕನ ಮೃತದೇಹ ಪತ್ತೆ

ಇದನ್ನೂ ಓದಿ:ಜೀವಂತವಾಗಿ ನನ್ನ ಮಗನಂತೂ ಬರಲಿಲ್ಲ, ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ದೇಶಕ್ಕೆ ಕರೆ ತನ್ನಿ: ಮೃತ ನವೀನ್ ತಂದೆಯ ಮನವಿ‌‌

ಚಳಗೇರಿ ಗ್ರಾಮದಶೇಕರಪ್ಪ ಗ್ಯಾನಗೌಡರ್​ಗೆ ಹರೀಶ ಮತ್ತು ನವೀನ ಗ್ಯಾನಗೌಡರ ಎಂಬ ಇಬ್ಬರು ಮಕ್ಕಳಿದ್ದು, ಎರಡು ಎಕರೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಮೊದಲು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೇಕರಪ್ಪ ನಂತರದಲ್ಲಿ ಜಮೀನಿನ ಕಡೆ ವಾಲಿದ್ದರು. ಕಡುಬಡತನದಲ್ಲಿದ್ದರೂ ಸಹ ಮಗನನ್ನು ಡಾಕ್ಟರ್ ಮಾಡುವ ಆಸೆಯನ್ನು ಈ ದಂಪತಿ ಹೊಂದಿದ್ದರು.

Last Updated : Mar 2, 2022, 12:31 PM IST

ABOUT THE AUTHOR

...view details