ಕರ್ನಾಟಕ

karnataka

ETV Bharat / state

ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪುಷ್ಪಾವತಿ ಆಯ್ಕೆ

ಆಗಸ್ಟ್​ 15ರಂದು ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹಾವೇರಿಯ ಪುಷ್ಪಾವತಿ ಸೋಮಪ್ಪ ಹೊನ್ನತ್ತಿ ಭಾಗವಹಿಸಲಿದ್ದಾರೆ.

haveri-women-selected-to-participate-in-the-independence-ceremony-to-be-held-in-red-fort
ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪುಷ್ಪಾವತಿ ಆಯ್ಕೆ

By

Published : Aug 14, 2023, 4:48 PM IST

Updated : Aug 14, 2023, 8:08 PM IST

ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪುಷ್ಪಾವತಿ ಆಯ್ಕೆ

ಹಾವೇರಿ :ಆಗಸ್ಟ್​​ 15ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ ಪುಷ್ಪಾವತಿ ಸೋಮಪ್ಪ ಹೊನ್ನತ್ತಿ ಅವರು ಆಯ್ಕೆಯಾಗಿದ್ದಾರೆ. ಪುಷ್ಪಾವತಿ ಅವರು ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮ ಪಂಚಾಯತ್​ನಲ್ಲಿ ಮಹಿಳಾ ನೀರಗಂಟಿ (ವಾಟರ್​ ವುಮನ್​) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಪುಷ್ಪಾವತಿ ಅವರಿಗೆ ಅವಕಾಶ ಲಭಿಸಿದ್ದು, ಈ ಸಂಬಂಧ ಹರ್ಷ ವ್ಯಕ್ತಪಡಿಸಿದ್ದಾರೆ.

ಜಲಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಎಂದು ಘೋಷಣೆ ಮಾಡಿರುವ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬರ ಹೆಸರನ್ನು ಕಳುಹಿಸಲು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಸಿಇಒಗೆ ಆದೇಶ ಮಾಡಿತ್ತು. ಅದರಂತೆ ಹಾವೇರಿಯ ಸಿಇಒ ಅಕ್ಷಯ ಶ್ರೀಧರ್ ಅವರು ಮಹಿಳಾ ನೀರಗಂಟಿಯಾಗಿರುವ ಪುಷ್ಪಾವತಿ ಹೆಸರು ಕಳುಹಿಸಿಕೊಟ್ಟಿದ್ದರು. ಈ ಸಂಬಂಧ ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಷ್ಪಾವತಿ ಅವರಿಗೆ ಕರೆ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಪುಷ್ಪಾವತಿ ಹೊನ್ನತ್ತಿ ಅವರು, "ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲು ಬೆಂಗಳೂರಿನಿಂದ ಕರೆ ಬಂತು. ಜಿಲ್ಲಾ ಪಂಚಾಯತ್​ ಅವರು ನನಗೆ ಕರೆ ಮಾಡಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಯ್ಕೆ ಆಗಿರುವ ಬಗ್ಗೆ ತಿಳಿಸಿದರು. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. ನಾನು ಬೆಂಗಳೂರನ್ನೇ ಕಂಡಿಲ್ಲ. ಇದೀಗ ಮೊದಲ ಬಾರಿಗೆ ಬೆಂಗಳೂರು ನಗರವನ್ನು ಕಾಣುತ್ತಿದ್ದೇನೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದಿಂದ ಧನ್ಯವಾದವನ್ನು ಅರ್ಪಿಸುತ್ತೇನೆ" ಎಂದು ಹೇಳಿದರು.

ಈ ಹಿಂದೆ ನೌಕರಿಯಲ್ಲಿದ್ದ ಪತಿ ಸೋಮಪ್ಪ ಅವರ ನಿಧನದಿಂದ ಪುಷ್ಪಾವತಿಗೆ ಅನುಕಂಪದ ಮೇಲೆ ಕೆಲಸ ದೊರೆತಿತ್ತು. ಇವರು ಗ್ರಾಮದ ಮನೆ ಮನೆಗಳಿಗೆ ನಲ್ಲಿ ನೀರು ಪೂರೈಸುವುದರ ಜೊತೆಗೆ ನೀರಿನ ಟ್ಯಾಂಕರ್ ಭರ್ತಿ ಸೇರಿದಂತೆ ಗ್ರಾಮ ಪಂಚಾಯತ್​ನ ಹಲವು ಕಾರ್ಯಗಳನ್ನು ಮಾಡುತ್ತಾರೆ. ಜೊತೆಗೆ ಗ್ರಾಮದಲ್ಲಿ ನಲ್ಲಿ ಅಳವಡಿಸುವ ಕೆಲಸವನ್ನು ಮಾಡುತ್ತಾರೆ. ಇವರ ಕಾರ್ಯಕ್ಕೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ಇದನ್ನೂ ಓದಿ:President's Police Medals: ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ 'ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ' ಗೌರವ

Last Updated : Aug 14, 2023, 8:08 PM IST

ABOUT THE AUTHOR

...view details