ಕರ್ನಾಟಕ

karnataka

ETV Bharat / state

ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಜೊತೆ ಅಸಭ್ಯ ವರ್ತನೆ ಆರೋಪ : ಹಾವೇರಿ ಸಿಪಿಐ ಅಮಾನತು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಸಿಪಿಐ ಚಿದಾನಂದ ದೂರು ನೀಡಲು ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು ಅಲ್ಲದೇ ಅವರ ಜೊತೆಗೆ ವಿಡಿಯೋ ಕಾಲ್ ಮಾಡಿ ಅಸಭ್ಯ ವರ್ತಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಪ್ರಸ್ತುತ ಆ ವಿಡಿಯೋಗಳು ವೈರಲ್ ಆದ ಹಿನ್ನೆಲೆ ಪೊಲೀಸ್​ಅನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ.

haveri-woman-police-station-cpi-suspended
ಮಹಿಳಾ ಪೊಲೀಸ್​ ಸಿಪಿಐ ಚಿದಾನಂದ

By

Published : Dec 19, 2021, 2:18 PM IST

ಹಾವೇರಿ: ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಫೋನ್​ ಸಂಖ್ಯೆ ತೆಗೆದುಕೊಂಡು ವಿಡಿಯೋ ಕರೆ ಮಾಡಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹಾವೇರಿಯ ಮಹಿಳಾ ಪೊಲೀಸ್ ಠಾಣೆಯ​ ಆರೋಪಿ ಸಿಪಿಐ ಚಿದಾನಂದ ಅವರನ್ನು ಅಮಾನತು ಮಾಡಲಾಗಿದೆ.

ಅಲ್ಲದೆ, ಸಿಪಿಐ ದೂರು ನೀಡಲು ಬರುವ ಮಹಿಳೆಯರ ಜೊತೆ ಠಾಣೆಯಲ್ಲಿಯೇ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗ್ತಿದೆ. ಪ್ರಸ್ತುತ ಮಹಿಳೆಯರ ಜೊತೆ ಅಸಭ್ಯವಾಗಿ ಮಾತನಾಡಿರುವ ವಿಡಿಯೋಗಳು ವೈರಲ್ ಆಗಿದೆ. ಚಿದಾನಂದ ಬಾತ್ ರೂಂನಲ್ಲಿದ್ದಾಗ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಫೋನ್​ನಲ್ಲಿ ಕೆಟ್ಟದಾಗಿ ಮಾತನಾಡಿದ್ದರು. ಓರ್ವ ಮಹಿಳೆಗೆ ಮಂಚಕ್ಕೆ ಕರೆದಿದ್ದ ಎಂದು ಮಹಿಳೆಯರು ಆರೋಪಿಸಿದ್ದಾರೆ.

Haveri police viral video : ಈ ಹಿನ್ನೆಲೆ ಈತನ ವಿರುದ್ಧ ಎಸ್‍ಪಿ, ಪೂರ್ವ ವಲಯ ಐಜಿಪಿ ರವಿ.ಎಸ್ ಸೇರಿದಂತೆ ಹಲವರಿಗೆ ಮಹಿಳೆಯರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೂರ್ವ ವಲಯ ಐಜಿಪಿ ಹಾಗೂ ಅಧಿಕಾರಿಗಳು ಚಿದಾನಂದ ಬಗ್ಗೆ ತನಿಖೆ ಮಾಡಿದ್ದಾರೆ. ನಂತರ ಅವರನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details