ಹಾವೇರಿ :ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಹಾಸ್ಟೇಲ್ ವಾರ್ಡನ್‌ನಿಂದ ಹಲ್ಲೆಗೊಳಗಾಗಿದ್ದ ಒಂಬತ್ತು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ವಾರ್ಡನ್ ಸಿಟ್ಟಿಗೆ ಹಾರಿಹೋಯ್ತು ಪುಟ್ಟ ಬಾಲಕನ ಪ್ರಾಣ.. - ಹಾವೇರಿ ವಾರ್ಡನ್ ಹಲ್ಲೆ ಸುದ್ದಿ
ಹುಬ್ಬಳ್ಳಿ ಮೂಲದ ವಿಜಯಕುಮಾರನನ್ನ ನಾಲ್ಕು ತಿಂಗಳ ಹಿಂದೆ ಹಾನಗಲ್ ಪಟ್ಟಣದ ಹಾಸ್ಟೇಲ್ ಒಂದಕ್ಕೆ ಸೇರಿಸಲಾಗಿತ್ತು. ಸೆಪ್ಟೆಂಬರ್ 3 ರಂದು ವಾರ್ಡನ್ ಶ್ರವಣಕುಮಾರ ಎಂಬಾತ ಪೆನ್ಸಿಲ್ ವಿಚಾರವಾಗಿ ಬಾಲಕನ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ಬಾಲಕನನ್ನ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು.
ಮೃತ ಬಾಲಕ ವಿಜಯಕುಮಾರ ಹಿರೇಮಠ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಮೂಲದ ವಿಜಯಕುಮಾರನನ್ನ ನಾಲ್ಕು ತಿಂಗಳ ಹಿಂದೆ ಹಾನಗಲ್ ಪಟ್ಟಣದ ಹಾಸ್ಟೇಲ್ ಒಂದಕ್ಕೆ ಸೇರಿಸಲಾಗಿತ್ತು. ಸೆಪ್ಟೆಂಬರ್ 3 ರಂದು ವಾರ್ಡನ್ ಶ್ರವಣಕುಮಾರ ಎಂಬಾತ ಪೆನ್ಸಿಲ್ ವಿಚಾರವಾಗಿ ಬಾಲಕನ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ಬಾಲಕನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದಾನೆ. ಹಲ್ಲೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ಮೃತ್ಯುಂಜಯ ಹಿರೇಮಠ ಅಕ್ಟೋಬರ್ 3ರಂದು ಹಾನಗಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ 323 ಕಲಂನಡಿ ಪ್ರಕರಣ ದಾಖಲಿಸಿದ್ದರು. ಇತ್ತ ವಾರ್ಡನ್ ಶ್ರವಣಕುಮಾರ ನಾಪತ್ತೆಯಾಗಿದ್ದು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.