ಹಾವೇರಿ: ರಾತ್ರೋರಾತ್ರಿ ಮೇಲ್ಛಾವಣಿ ಕೊರೆದು ಖದೀಮರು ವೈನ್ ಶಾಪ್ಗೆ ಕನ್ನ ಹಾಕಿರೋ ಘಟನೆ ನಗರದಲ್ಲಿ ನಡೆದಿದೆ.
ಹಾವೇರಿಯಲ್ಲಿ ಮೇಲ್ಛಾವಣಿ ಕೊರೆದು ವೈನ್ ಶಾಪ್ಗೆ ಕನ್ನ ಹಾಕಿದ ಖದೀಮರು - ಹಾವೇರಿ ಲೆಟೆಸ್ಟ್ ಕ್ರೈಂ ನ್ಯೂಸ್
ಮೇಲ್ಛಾವಣಿ ಕೊರೆದು ವೈನ್ ಶಾಪ್ಗೆ ಕನ್ನ ಹಾಕಿರೋ ಘಟನೆ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೇಲ್ಛಾವಣಿ ಕೊರೆದು ವೈನ್ ಶಾಪ್ಗೆ ಕನ್ನ
ನಗರದ ಪಿ.ಬಿ. ರಸ್ತೆಯಲ್ಲಿರುವ ಮುತ್ತುರಾಜ ಎಂಬುವರಿಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ವೈನ್ ಸೆಂಟರ್ನಲ್ಲಿ ಕಳ್ಳತನವಾಗಿದೆ. ಆದ್ರೆ ಎಷ್ಟು ಪ್ರಮಾಣದ ಮದ್ಯ ಕಳ್ಳತನ ಆಗಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಲಾಕ್ ಡೌನ್ನಿಂದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಅಂಗಡಿಗೆ ಸೀಲ್ ಹಾಕಿ ಬೀಗ ಜಡಿದಿದ್ರು. ಇದರಿಂದ ಅಂಗಡಿ ಓಪನ್ ಮಾಡಿದ ಮೇಲಷ್ಟೆ ಎಷ್ಟು ಪ್ರಮಾಣ ಮದ್ಯ ಕಳ್ಳತನ ಆಗಿದೆ ಎಂಬುದರ ಬಗ್ಗೆ ಮಾಹಿತಿ ಗೊತ್ತಾಗಲಿದೆ.
ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.