ಕರ್ನಾಟಕ

karnataka

ETV Bharat / state

ಆಲೆಮನೆಗಳ ಮೊರೆ ಹೋದ ಕಬ್ಬು ಬೆಳೆಗಾರರು; ಇದೇ ಲಾಭದಾಯಕ ಅಂತಾರೆ ಹಾವೇರಿ ರೈತರು

ಹಾವೇರಿ ಜಿಲ್ಲೆಯ ಶೀಗಿಹಳ್ಳಿ ಸಿಂಗಾಪುರ, ಆಡೂರು ಸೇರಿದಂತೆ ವಿವಿಧೆಡೆ ಆಲೆಮನೆಗಳನ್ನು ಆರಂಭ ಮಾಡಿರುವ ರೈತರು, ಬೆಲ್ಲ ತಯಾರಿಸಲು ಮುಂದಾಗಿದ್ದಾರೆ.

By ETV Bharat Karnataka Team

Published : Dec 4, 2023, 3:16 PM IST

Updated : Dec 4, 2023, 8:30 PM IST

Haveri: Sugarcane growers ready to make jaggery
ಹಾವೇರಿ: ಆಲೆಮನೆಗಳ ಮೊರೆ ಹೋಗಿದ ಕಬ್ಬು ಬೆಳೆಗಾರರು

ಆಲೆಮನೆಗಳ ಮೊರೆ ಹೋದ ಕಬ್ಬು ಬೆಳೆಗಾರರು; ಇದೇ ಲಾಭದಾಯಕ ಅಂತಾರೆ ಹಾವೇರಿ ರೈತರು

ಹಾವೇರಿ:ಪ್ರತಿವರ್ಷ ಕಬ್ಬು ಬೆಳೆಗಾರರು ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುವುದು ಸಾಮಾನ್ಯವಾಗಿದೆ. ದರ ಅಧಿಕವಿದ್ದಾಗ ಇಳುವರಿ ಕಡಿಮೆ ಇರುತ್ತೆ. ಇಳುವರಿ ಅಧಿಕವಿದ್ದಾಗ ಬೆಲೆ ಕಡಿಮೆ ಇರುತ್ತೆ. ಇವೆರಡು ಇದ್ದರೆ ಕಾರ್ಖಾನೆ ಮಾಲೀಕರು ರೈತರು ಪೂರೈಸಿದ ಕಬ್ಬು ಪಡೆದು ಹಣ ನೀಡಲು ವಿಳಂಬವಾಗುತ್ತದೆ. ಕಬ್ಬು ಕಟಾವ್ ಮಾಡುವುದು ಹಾಗೂ ಕಟಾವ್ ಮಾಡಿದ ಕಬ್ಬು ಸಾಗಾಣಿಕೆಯ ಸಮಸ್ಯೆ. ಹೀಗೆ ವಿವಿಧ ಕಷ್ಟಗಳಿಂದ ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಕಬ್ಬು ಕಹಿಯಾಗಲಾರಂಭಿಸಿದೆ.

ಈ ಎಲ್ಲ ರಗಳೆ ಬೇಡವೆಂದು ಹಾವೇರಿ ಜಿಲ್ಲೆಯ ಕೆಲ ಕಬ್ಬು ಬೆಳೆಗಾರರು ಆಲೆಮನೆಗಳ ಮೊರೆ ಹೋಗಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಮಂಡ್ಯಕ್ಕೆ ಹೋಗಿದ್ದ ರೈತರ ತಂಡವು ಸದ್ಯ ಹಾನಗಲ್ ತಾಲೂಕಿನ ಶೀಗಿಹಳ್ಳಿ ಸಿಂಗಾಪುರ, ಆಡೂರು ಸೇರಿದಂತೆ ವಿವಿಧೆಡೆ ಆಲೆಮನೆಗಳನ್ನು ಸ್ಥಾಪಿಸಿದೆ. ದೀಪಾವಳಿ ಮುಗಿಯುತ್ತಿದ್ದಂತೆ ಈ ಆಲೆಮನೆಗಳು ಕಾರ್ಯಾರಂಭ ಮಾಡಿವೆ. ದೂರದ ಉತ್ತರ ಪ್ರದೇಶದಿಂದ ಆಗಮಿಸುವ ಕೂಲಿಕಾರ್ಮಿಕರಿಗೆ ಗುತ್ತಿಗೆ ನೀಡಿ ಕಬ್ಬು ತಯಾರಿಸಲು ಮುಂದಾಗುತ್ತಾರೆ.

ಈ ವರ್ಷ ಸಹ ಆಲೆಮನೆಗಳು ಮಾಲೀಕರು ಕಬ್ಬಿನಿಂದ ಬೆಲ್ಲ ತಯಾರಿಸಲು ಮುಂದಾಗಿದ್ದಾರೆ. ಕಬ್ಬಿನ ಇಳುವರಿ ಕಡಿಮೆಯಾಗಿರುವುದು ಕೂಲಿಕಾರ್ಮಿಕರ ಅಲಭ್ಯತೆ, ಅಧಿಕ ಖರ್ಚು ಇದ್ದರೂ ಸಹ ತಮಗೆ ಲಾಭ ಸಿಗುತ್ತೆ ಎಂಬ ಆಶಾಭಾವನೆಯೊಂದಿಗೆ ಬೆಲ್ಲ ತಯಾರಿಕೆಯಲ್ಲಿ ತೊಡಗಿದ್ದಾರೆ. ಕಬ್ಬು ಬೆಳೆಯುವುದು ಅದನ್ನು ಬೆಳೆಸಿ ಕಟಾವ್‌ಗೆ ಕಾರ್ಖಾನೆ ಕಡೆ ಮುಖಮಾಡುವುದು, ಕಟಾವ್ ಖರ್ಚು ಸಾಗಣಿಕೆ ವೆಚ್ಚ, ಕಾರ್ಖಾನೆಗೆ ಕಬ್ಬು ಸಾಗಿಸಿ ವರ್ಷಗಟ್ಟಲೆ ಹಣಕ್ಕಾಗಿ ಕಾರ್ಖಾನೆಗೆ ಅಲೆಯುವುದು, ಪ್ರತಿಭಟನೆ ಮಾಡುವುದು, ಇದ್ಯಾವುದರ ಗೊಂದಲ ಇರುವುದಿಲ್ಲ ಎನ್ನುತ್ತಾರೆ ಆಲೆಮನೆ ಸ್ಥಾಪಿಸಿರುವ ಮಾಲೀಕರು.

ಇಲ್ಲಿ ತಯಾರಿಸಿದ ಬೆಲ್ಲದ ಪೆಂಟೆಗಳನ್ನು ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ವರ್ತಕರು ಬಂದು ಖರೀದಿ ಮಾಡುತ್ತಾರೆ. ಖರೀದಿಯಾಗುತ್ತಿದ್ದಂತೆ ಸ್ಥಳದಲ್ಲೇ ಹಣ ನೀಡುತ್ತಾರೆ. ಹೀಗಾಗಿ ನಮಗೆ ಆಲೆಮನೆಗಳಿಂದ ಉತ್ತಮ ಆದಾಯವಿದೆ ಎನ್ನುತ್ತಾರೆ ಅವರು. ಪ್ರಸ್ತುತ ವರ್ಷ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳು ಟನ್‌ಗೆ 3,100 ರೂಪಾಯಿ ಹಣ ನೀಡುತ್ತವೆ. ಆದರೆ, ಕಬ್ಬು ಕಟಾವ್ ಮಾಡುವರಿಗೆ ಟನ್‌ಗೆ ಸಾವಿರ ರೂಪಾಯಿ ನೀಡಬೇಕು. ಇದರ ಜೊತೆ ಬೇರೆ ಖರ್ಚು ಸೇರಿ, ಕಬ್ಬಿಗೆ ಎರಡು ಸಾವಿರ ರೂಪಾಯಿ ಹಣ ಸಿಗುತ್ತೆ. ಆದರೆ, ಆಲೆಮನೆಗಳಲ್ಲಿ ಟನ್‌ ಕಬ್ಬಿಗೆ 2,500 ರೂಪಾಯಿ ಸಿಗುತ್ತೆ. ಜೊತೆಗೆ ನಾಲ್ಕೈದು ಜನರಿಗೆ ಕೆಲಸ ತೃಪ್ತಿ ಇರುತ್ತೆ. ಸದ್ಯ ಬೆಲ್ಲದ ಬೆಲೆ 10 ಕೆಜಿಗೆ 340 ರೂಪಾಯಿ ಇದೆ. ಇದೇ ದರ ಮುಂದುವರೆದರೆ ಸಾಕು ನಮಗೆ ಲಾಭ ಸಿಕ್ಕೇ ಸಿಗುತ್ತೆ. ಪ್ರತಿ ಬಾರಿ ದೀಪಾವಳಿಯಿಂದ ಆರಂಭವಾಗುವ ಆಲೆಮನೆಗಳು ಮೂರು ತಿಂಗಳುಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಹೇಳುತ್ತಾರೆ ಮಾಲೀಕರು.

''ಮೊದಲು ಮಾಲೀಕರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ. ನಂತರ ಅಕ್ಕಪಕ್ಕದ ರೈತರ ಕಬ್ಬಿಗೆ ದರ ನಿಗದಿ ಮಾಡಿ ಖರೀದಿಸಿ, ಬೆಲ್ಲ ತಯಾರಿಸುತ್ತಾರೆ. ಇದಲ್ಲದೆ ರೈತರು ತಾವೇ ತಮ್ಮ ಕಬ್ಬು ತಂದು ಬೆಲ್ಲ ಮಾಡಿಕೊಂಡು ಹೋಗಲು ಅವಕಾಶವಿರುತ್ತೆ. ಪ್ರಸ್ತುತ ವರ್ಷ ಕೂಲಿಕಾರ್ಮಿಕರ ಸಮಸ್ಯೆ ಮತ್ತು ಇಳುವರಿ ಕಡಿಮೆಯಾಗಿರುವುದು, ಆಲೆಮನೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಹಿಂದೆ 50ಕ್ಕೂ ಅಧಿಕ ಆಲೆಮನೆಗಳು ಇದ್ದವು. ಸದ್ಯ ಬೆರಳೆಣಿಕೆಯಷ್ಟು ಆಲೆಮನೆಗಳಲ್ಲಿ ಬೆಲ್ಲ ತಯಾರಿಸಲಾಗುತ್ತಿದೆ. ಬರ ಬಿದ್ದಿರುವ ಹಿನ್ನೆಲೆ ಇಳುವರಿ ಕಡಿಮೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭವಾಗಿರುವುದರಿಂದ ಆಲೆಮನೆಗಳ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ರೈತರು.

ಇದನ್ನೂ ಓದಿ:ಮಾಜಿ ಸಂಸದ ಎಲ್​.ಆರ್.ಶಿವರಾಮೇಗೌಡ ಸೇರಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ

Last Updated : Dec 4, 2023, 8:30 PM IST

ABOUT THE AUTHOR

...view details