ಹಾವೇರಿ: ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆದ ಅಪರಾಧ ಕೃತ್ಯಗಳ ಆರೋಪಿಗಳನ್ನ ಬಂಧಿಸಿದ್ದಾರೆ. ಏ.19ರಂದು ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸ್ತೂಲ್, ಗುಂಡುಗಳನ್ನು ತಯಾರಿಸಿ ಕೊಟ್ಟಿದ್ದ ಮೂವರನ್ನ ಬಂಧಿಸಲಾಗಿದೆ. ಬಿಹಾರದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾದಲ್ಲಿ ಬಂಧಿಸಿ, ಆರೋಪಿಗಳನ್ನ ಹಾವೇರಿಗೆ ಕರೆತರಲಾಗುತ್ತಿದೆ.
ಬುಧವಾರ ಸಂಜೆ ಶಿಗ್ಗಾವಿಯಲ್ಲಿ ಚಿನ್ನಿದಾಂಡು ಆಟದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪ್ರಕರಣವನ್ನ ಸಹ ಬೇಧಿಸಿರುವ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಜೊತೆಗೆ ಹಾನಗಲ್ ತಾಲೂಕಿನ ತಿಳುವಳ್ಳಿಯಲ್ಲಿ ಮೇ 31ರಂದು ಸಂಜೆ ನಡೆದಿದ್ದ ವಿಕಲಚೇತನ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನ ಸಹ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ:ಶಿಗ್ಗಾವಿಯಲ್ಲಿ ಚಿನ್ನಿದಾಂಡು ಆಟದ ವೇಳೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು, ಕುತ್ತಿಗೆ ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ರಾಜೇಶ್ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾವೇರಿ ತಾಲೂಕಿನ ದಿಡಗೂರ ಗ್ರಾಮದ ಆರೋಪಿ ರಾಜೇಶ್, ಹಾನಗಲ್‌ನ ಗಂಗಾನಗರದ ಪಾರ್ವತಿ ಅವರನ್ನು ಪ್ರೀತಿಸಿ 2021ರಲ್ಲಿ ವಿವಾಹವಾಗಿದ್ದ. ನಂತರ ಪಾರ್ವತಿ ಹೆಸರಿನಲ್ಲಿ ₹2 ಲಕ್ಷ ಲೋನ್ ಮಾಡಿ ಹಣವನ್ನು ತೆಗೆದುಕೊಂಡಿದ್ದ. ಪತಿಯ ಕಿರುಕುಳದಿಂದ ಮನನೊಂದ ಪಾರ್ವತಿ ತಂಗಿ ಮನೆಯಲ್ಲಿ ವಾಸವಾಗಿದ್ದರು.