ಹಾವೇರಿ:ಪಂಜಾಬ್ನ ಪಠಾಣಕೋಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಮೂಲದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಲೂಕಿನ ಕೆ.ಬಿ. ತಿಮ್ಮಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಸುತ್ತೂರಮಠ(40) ಎಂಬುವರೇ ಮೃತ ಯೋಧ.
ಪಂಜಾಬ್ನಲ್ಲಿ ಹಾವೇರಿಯ ಯೋಧ ಹೃದಯಾಘಾತದಿಂದ ನಿಧನ - ಪಂಜಾಬ್ನಲ್ಲಿ ಹಾವೇರಿಯ ಯೋಧ ಹೃದಯಾಘಾತದಿಂದ ಮೃತ
ಪಠಾಣಕೋಟ್ನಲ್ಲಿ ಹಾವೇರಿಯ ಯೋಧ ಸಾವು- ಹೃದಯಾಘಾತದಿಂದ ಮೃತ- ಇಂದು ಹುಟ್ಟೂರಿಗೆ ಪಾರ್ಥಿವ ಶರೀರ
ಹೃದಯಾಘಾತದಿಂದ ಯೋಧ ಮೃತ
ಬಿಎಸ್ಎಫ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಜುಲೈ 21ರ ಮುಂಜಾನೆ ಸಾವನ್ನಪ್ಪಿದ್ದಾರೆ. ಮೃತರ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ ಆಗಮಿಸಲಿದ್ದು, ಹುಟ್ಟೂರಲ್ಲಿ ನೀರವ ಮೌನ ಆವರಿಸಿದೆ. ಬಳಿಕ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ;ನಕಲಿ ಆಸ್ತಿ ಪತ್ರ ಸೃಷ್ಟಿಸಿ ವಂಚನೆ.. ಕಲಬುರಗಿಯಲ್ಲಿ ತಹಶೀಲ್ ಸಿಬ್ಬಂದಿ ಸೇರಿ ಐವರ ವಿರುದ್ಧ ಕೇಸ್