ಹಾವೇರಿ:ಶಿಗ್ಗಾಂವಿ ಚಿತ್ರಮಂದಿರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪಿಸ್ತೂಲ್ ಮತ್ತು ಗುಂಡು ತಯಾರಿಸಿ ಕೊಟ್ಟಿದ್ದ ಬಿಹಾರದ ಮೂವರನ್ನು ರಾಜ್ಯದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾ ಗ್ರಾಮದಲ್ಲಿ ಹಾವೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಸಮ್ಸದ್ ಅಲಾಮ, ಮೊಹಮ್ಮದ್ ಆಸೀಫ್ ಅಲಾಮ ಹಾಗೂ ಮೊಹಮ್ಮದ್ ಸಾಹೀದ್ ಚಾಂದ್ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳು.
ಶಿಗ್ಗಾಂವಿ ಚಿತ್ರಮಂದಿರದಲ್ಲಿ ಶೂಟೌಟ್ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ಏಪ್ರಿಲ್ 19ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಶೂಟೌಟ್ ನಡೆದಿತ್ತು. ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹಾವೇರಿ ಪೊಲೀಸರು ಬಿಹಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ಶೂಟೌಟ್ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ಏ.19ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಶೂಟೌಟ್ ನಡೆದಿತ್ತು. ಶೂಟೌಟ್ ಮಾಡಿಸಿದ್ದ ಪ್ರಮುಖ ಆರೋಪಿ ಮಂಜುನಾಥ ಅಲಿಯಾಸ್ ಸಂತೋಷ ಅಲಿಯಾಸ್ ಮಲ್ಲಿಕ್ ಪಾಟೀಲನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದೆ. ಶಿಗ್ಗಾಂವಿ ಪೊಲೀಸರ ಕಾರ್ಯಕ್ಕೆ ಡಿಜಿ ಮತ್ತು ಐಜಿಪಿ ಮೆಚ್ಚುಗೆ ವ್ಯಕ್ತಪಡಿಸಿ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ:ಶಿಗ್ಗಾವಿಯಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ