ಹಾವೇರಿ:ಕೊರೊನಾ ಸೋಂಕು ತಡೆಗೆ ಭಾರತ ಲಾಕ್ಡೌನ್ ಇದ್ದರೂ ಕೆಲವರು ಅನಗತ್ಯವಾಗಿ ಬೈಕ್ ಮತ್ತು ಕಾರುಗಳಲ್ಲಿ ಓಡಾಡ್ತಿದ್ದಾರೆ. ಅಂಥವರ ಬೈಕ್ ಮತ್ತು ಕಾರುಗಳನ್ನ ಸೀಜ್ ಮಾಡಿ ಹಾವೇರಿ ಪೊಲೀಸರು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿದ್ದವರ ಬೈಕ್, ಕಾರು ಸೀಜ್ ಮಾಡಿದ ಪೊಲೀಸರು
ನಗರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರು ಮತ್ತು ಬೈಕ್ಗಳನ್ನು ಹಾವೇರಿ ಪೊಲೀಸರು ಸೀಜ್ ಮಾಡಿದ್ದಾರೆ.
ಲಾಕ್ಡೌನ್ ನಂತರದ ಆರಂಭದ ದಿನಗಳಲ್ಲಿ ಪೊಲೀಸರು ಅನಗತ್ಯವಾಗಿ ಓಡಾಡೋರಿಗೆ ಲಾಠಿ ರುಚಿ ತೋರಿಸಿದ್ರು. ನಂತರ ಲಾಠಿ ಬಿಟ್ಟು ಐನೂರು ರೂಪಾಯಿ ದಂಡ ಫಿಕ್ಸ್ ಮಾಡಿದ್ರು. ಆದ್ರೂ ಜನರು ಯಾವುದಕ್ಕೂ ಡೋಂಟ್ ಕೇರ್ ಅಂತಾ ಮತ್ತೆ ಮತ್ತೆ ಅನಗತ್ಯವಾಗಿ ಬೈಕ್ ಮತ್ತು ಕಾರುಗಳಲ್ಲಿ ಓಡಾಡ್ತಿದ್ದಾರೆ. ಹೀಗಾಗಿ ನಗರದಲ್ಲಿ ಡಿವೈಎಸ್ಪಿ ವಿಜಯಕುಮಾರ, ಸಿಪಿಐ ಚಿದಾನಂದ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಕೆಲವೇ ಕೆಲವು ನಿಮಿಷಗಳಲ್ಲಿ ಪೊಲೀಸರು ಅನಗತ್ಯವಾಗಿ ಓಡಾಡ್ತಿದ್ದ ಬೈಕ್ ಹಾಗೂ ಕಾರುಗಳನ್ನ ಸೀಜ್ ಮಾಡಿದ್ದಾರೆ. ಸೀಜ್ ಆದ ವಾಹನಗಳಿಂದ ನಗರ ಪೊಲೀಸ್ ಠಾಣೆ ಆವರಣ ತುಂಬಿ ತುಳುಕ್ತಿದೆ. ಪೊಲೀಸರು ಕಾರು ಮತ್ತು ಬೈಕ್ ಸೀಜ್ ಮಾಡುತ್ತಿದ್ದಂತೆ ಅನಗತ್ಯವಾಗಿ ಓಡಾಡೋರು ಕಾಲು ನಡಿಗೆಯಲ್ಲಿ ಮನೆಯತ್ತ ಹೋಗ್ತಿದ್ದಾರೆ.