ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಜನತಾ ಕರ್ಫ್ಯೂಗಿಲ್ಲ ಸಹಕಾರ: ನಿಯಮ ಮರೆತವ್ರಿಗೆ ಪೊಲೀಸರಿಂದ ಲಾಠಿ ರುಚಿ - ಹಾವೇರಿಯಲ್ಲಿ ನಿಯಮ ಉಲ್ಲಂಘನೆ

ಹಾವೇರಿಯಲ್ಲಿ ಕೊರೊನಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ. 10 ಗಂಟೆಯ ನಂತರವೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸುಖಾಸುಮ್ಮನೆ ಜನರ ಓಡಾಟ ಕಂಡುಬಂದಿದೆ. ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

haveri people violated curfew rules
ಹಾವೇರಿಯಲ್ಲಿ ಜನತಾ ಕರ್ಫ್ಯೂಗಿಲ್ಲ ಸಹಕಾರ

By

Published : Apr 30, 2021, 2:05 PM IST

ಹಾವೇರಿ: ಜನತಾ ಕರ್ಫ್ಯೂಗೆ ಇಂದು ಸಹ ಕೆಲ ವರ್ತಕರು ಅಸಹಕಾರ ತೋರಿಸಿದ್ದಾರೆ. ಮುಂಜಾನೆ 6ರಿಂದ 10ರವರೆಗೆ ಅವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಬಟ್ಟೆ ಅಂಗಡಿ ಮತ್ತು ಆಭರಣಗಳ ಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆದು ವಹಿವಾಟು ನಡೆಸಿದ್ದಾರೆ.

ಹಾವೇರಿಯಲ್ಲಿ ನಿಯಮ ಉಲ್ಲಂಘನೆ - ಪೊಲೀಸರ ಕ್ರಮ

ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಗ್ರಾಹಕರನ್ನು ಅಂಗಡಿಗಳ ಒಳಗೆ ಬಿಟ್ಟು ಹೊರಗೆ ಕೀಲಿ ಹಾಕಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಬಟ್ಟೆ ಮತ್ತು ಬಂಗಾರದಂಗಡಿ ಮಾಲೀಕರನ್ನು ತೀವ್ರ ತರಾಟೆಗೆ ತಗೆದುಕೊಂಡರು. ಅಲ್ಲದೇ ಇಬ್ಬರು ಮಾಲೀಕರನ್ನು ವಶಕ್ಕೆ ಪಡೆದು ಅಂಗಡಿಗಳನ್ನು ಬಂದ್ ಮಾಡಿಸಿದರು.

ಪಿಎಸ್ಐ ನಂದಿ ನೇತೃತ್ವದ ತಂಡ ನಗರದಲ್ಲಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವ ವರ್ತಕರ ಮೇಲೆ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಅವಶ್ಯಕ ವಸ್ತುಗಳನ್ನು ಬಿಟ್ಟು ಬೇರೆ ಯಾರೇ ಅಂಗಡಿ ತೆರೆದು ವಹಿವಾಟು ನಡೆಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ನಂದಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕಲಬುರಗಿ: ಮಾತು ಕೇಳದವರಿಗೆ ಲಾಠಿ ರುಚಿ

ಪೊಲೀಸರ ತಂಡ ಪಾದಚಾರಿ ಮಾರ್ಗದಲ್ಲಿ ತೆರೆದಿದ್ದ ಗೂಡಂಗಡಿಗಳ ವರ್ತಕರಿಗೆ ಲಾಠಿ ರುಚಿ ತೋರಿಸಿದರು. 10 ಗಂಟೆಯಾದರೂ ಕೂಡ ಅಂಗಡಿ ತೆರೆದಿದ್ದ ಕಾರಣ ಲಾಠಿ ಬೀಸಿದ ಪೊಲೀಸ್ ಸಿಬ್ಬಂದಿ, ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಮಾಸ್ಕ್ ಹಾಕಿಕೊಳ್ಳದಿರುವವರು, ಅನಗತ್ಯವಾಗಿ ಸಂಚರಿಸುವವರ ಮೇಲೆ ಸಹ ಪೊಲೀಸರು ಲಾಠಿ ಬೀಸಿದರು.

ABOUT THE AUTHOR

...view details