ಹಾವೇರಿ:ಪುನುಗು ಬೆಕ್ಕಿನ ಮರಿಗಳನ್ನ ಚಿರತೆ ಮರಿಗಳೆಂದು ತಿಳಿದು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕುಸನೂರು ಗ್ರಾಮದಲ್ಲಿ ನಡೆದಿದೆ.
ಪುನುಗು ಬೆಕ್ಕಿನ ಮರಿಗಳನ್ನ ಕಂಡು ಚಿರತೆ ಎಂದು ಬೆದರಿದ ಜನ! - people fears about civet cats news
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕುಸನೂರು ಗ್ರಾಮದಲ್ಲಿ ಪುನುಗು ಬೆಕ್ಕಿನ ಮರಿಗಳನ್ನು ಕಂಡು ಜನ ಚಿರತೆ ಮರಿಗಳೆಂದು ಭಾವಿಸಿ ಭಯಭೀತರಾದ ಘಟನೆ ನಡೆದಿದೆ.
![ಪುನುಗು ಬೆಕ್ಕಿನ ಮರಿಗಳನ್ನ ಕಂಡು ಚಿರತೆ ಎಂದು ಬೆದರಿದ ಜನ! civet cat](https://etvbharatimages.akamaized.net/etvbharat/prod-images/768-512-10033392-thumbnail-3x2-civet.jpg)
ಗ್ರಾಮದ ರೈತರೊಬ್ಬರ ಜಮೀನಿನ ಮೆಕ್ಕೆಜೋಳದ ರಾಶಿಯಲ್ಲಿ ಈ ಮರಿಗಳು ಕಂಡುಬಂದಿವೆ. ರಾತ್ರಿ ವೇಳೆ ಇವುಗಳನ್ನು ಕಂಡ ಸ್ಥಳೀಯರು, ಚಿರತೆ ಮರಿಗಳಿರಬಹುದೆಂದು ಭಯಭೀತರಾಗಿದ್ದಾರೆ. ವಿಷಯ ತಿಳಿದ ಕೆಲವರು ಅರಣ್ಯಾಧಿಕಾರಿಗಳು ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಾನಗಲ್ ಅರಣ್ಯಾಧಿಕಾರಿ ಪರಮೇಶಪ್ಪ ಪೇಲವರ ಈ ಮರಿಗಳನ್ನ ಪರೀಕ್ಷೆ ನಡೆಸಿದ್ದಾರೆ. ಇವು ಚಿರತೆಯ ಮರಿಗಳಲ್ಲ ಪುನುಗು ಬೆಕ್ಕಿನ ಮರಿಗಳು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ನಂತರ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಚಿರತೆ ಮರಿಗಳೆಂದು ಆತಂಕಪಟ್ಟಿದ್ದ ಕುಸನೂರು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.