ಹಾವೇರಿ: ಜಿಲ್ಲೆಯ ಶಾಂತಿನಗರದಲ್ಲಿ ಸುಡುಗಾಡು ಸಿದ್ದರ 45 ಕುಟುಂಬಗಳು ತಗಡಿನ ಶೆಡ್‌ನಲ್ಲಿ ವಾಸಿಸುತ್ತಿವೆ. 2019ರಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡಿದ್ದ ಈ ಕುಟುಂಬಗಳಿಗೆ ಸರ್ಕಾರ ತಗಡಿನ ಶೆಡ್ ಹಾಕಿಕೊಟ್ಟಿತ್ತು. ಈಗ ಮತ್ತೆ ಭಾರಿ ಮಳೆ ಮತ್ತು ಗಾಳಿಗೆ ಶೆಡ್ಗಳು ಹಾರಿಹೋಗಿವೆ.
ಮನೆಯಿಲ್ಲದೇ, ಮೂಲಭೂತ ಸೌಕರ್ಯವಿಲ್ಲದೇ ಕುಟುಂಬಗಳಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರ ಕೆಲ ಸಣ್ಣಪುಟ್ಟ ಸಹಾಯ ಮಾಡಿದ್ದು, ಬಿಟ್ಟರೆ ಯಾವುದೇ ಶಾಶ್ವತ ಪರಿಹಾರ ಕಾರ್ಯ ಮಾಡಿಲ್ಲ. ಆದರೆ ಈಗ ನೊಂದಿರುವ ಕುಟುಂಬಗಳು ಪರಿಹಾರಕ್ಕಾಗಿ ಬಹುಭಾಷಾ ನಟ ಸೋನು ಸೂದ್ ಮೊರೆ ಹೋಗಿವೆ.