ಹಾವೇರಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ನಡೆಯುತ್ತಿರುವ 'ಆಪರೇಷನ್ ಗಂಗಾ' ಕಾರ್ಯಾಚರಣೆ ಚುರುಕುಗೊಂಡಿದ್ದು, ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ತವರಿಗೆ ವಾಪಸ್ ಮರಳಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದ ಶಿವಾನಿ ಮಡಿವಾಳರ ಎಂಬ ವಿದ್ಯಾರ್ಥಿನಿ ನಿನ್ನೆ ರಾತ್ರಿ ಮನೆ ತಲುಪಿದ್ದು, ಕುಟುಂಬಸ್ಥರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಉಕ್ರೇನ್ ಸ್ಥಿತಿ ಬಿಚ್ಚಿಟ್ಟ ಶಿವಾನಿ ಮಡಿವಾಳರ: ಯುದ್ಧ ಪ್ರಾರಂಭವಾಗುವ ಮಾಹಿತಿಯೇ ಇರಲಿಲ್ಲ. ವಿಶ್ವವಿದ್ಯಾನಿಲಯದವರು ನಮಗೆ ಕೊನೆ ಗಳಿಗೆಯಲ್ಲಿ ಮಾಹಿತಿ ನೀಡಿದರು. ನನಗೆ ಫ್ಲೈಟ್ ಬುಕ್ ಆಗಿತ್ತು ಬಳಿಕ ಕ್ಯಾನ್ಸಲ್ ಆಯಿತು. ನಾವು ಚಾಕಲೇಟ್, ಚಿಪ್ಸ್ ತಿಂದು ಅಲ್ಲಿ ಜೀವನ ಸಾಗಿಸಿದೆವು ಎಂದು ಅಲ್ಲಿನ ಸಂಕಷ್ಟ ಬಿಚ್ಚಿಟ್ಟರು.
ಮಗಳು ಶಿವಾನಿಯನ್ನ ಅದ್ಧೂರಿಯಾಗಿ ಬರಮಾಡಿಕೊಂಡ ಕುಟುಂಬಸ್ಥರು ನನಗೆ ಓದಲು ನವೀನ್ ಸಹಾಯ ಮಾಡಿದ್ದ: ನನಗಿಂತ ಮೊದಲು ಒಂದು ತಿಂಗಳು ನವೀನ್ ಉಕ್ರೇನ್ಗೆ ಹೋಗಿದ್ದ. ನನ್ನ ಓದಿಗೆ ಸಹಾಯ ಮಾಡಿದ್ದ, ಒಳ್ಳೆಯ ವಿದ್ಯಾರ್ಥಿ. ಅವನು ವಿಶ್ವವಿದ್ಯಾನಿಲಯ ಬಿಟ್ಟರೆ ಲೈಬ್ರರಿಯಲ್ಲಿ ಓದುತ್ತಿದ್ದ. ಲೈಬ್ರರಿಯಿಂದ ಕೊನೆಗೆ ಹೋಗುತ್ತಿದ್ದ. ಆತ ಮೃತಪಟ್ಟಿಲ್ಲ, ನಮ್ಮ ಜೊತೆಗೆ ಇದ್ದಾನೆ. ನವೀನ್ ಸಾವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಉಳಿದ ವಿದ್ಯಾರ್ಥಿಗಳನ್ನ ಕರೆತರುವ ಕೆಲಸ ಮಾಡಬೇಕು ಎಂದು ಶಿವಾನಿ ಮನವಿ ಮಾಡಿದರು.
ಇದನ್ನೂ ಓದಿ:Operation Ganga: ದೆಹಲಿ, ಮುಂಬೈಗೆ ಬಂದ ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು, ಬರಮಾಡಿಕೊಂಡ ಕೇಂದ್ರ ಸಚಿವರು