ಹಾವೇರಿ:ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಕವಿತಾ ಸಾವು ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ.
ಆ.23 ರಂದು ಮನೆಯಿಂದ ಕಾಲೇಜಿಗೆ ಹೋಗಿದ್ದ ಕವಿತಾ ಎಂಬ ಯುವತಿ ಶಿಗ್ಗಾಂವಿ ಸಮೀಪದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದರ ಬೆನ್ನಲ್ಲೆ ಪೊಲೀಸ್ ಇಲಾಖೆ ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅಧಿಕಾರಿಗಳ ತಂಡ ರಚಿಸಿ ತನಿಖೆ ಚುರುಕುಗೊಳಿಸಿದೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರಿಗೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿಯುತ್ತಿಲ್ಲ.
ಬಿಎ ದ್ವಿತೀಯ ತರಗತಿಯಲ್ಲಿ ಓದುತ್ತಿದ್ದ ಕವಿತಾ, ಆ.23 ರಂದು ಪರೀಕ್ಷೆ ಇರುವ ಕಾರಣ ಕಾಲೇಜಿಗೆ ಬಂದಿದ್ದಳು. ಮುಂಜಾನೆ ಕಾಲೇಜಿಗೆ ಎಂದು ಹೋದವಳ ಶವ ಸಂಜೆ ಪತ್ತೆಯಾಗಿದ್ದು, ಯಾಕೆ. ಕವಿತಾಳ ಕಿವಿಯಲ್ಲಿ ರಕ್ತ ಬಂದಿದ್ದು ಬಿಟ್ಟರೆ ದೇಹದಲ್ಲಿ ಹೇಳಿಕೊಳ್ಳುವಂತಹ ಗಾಯಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.