ಹಾವೇರಿ :ಉತ್ತರ ಕರ್ನಾಟಕ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಹುಕ್ಕೇರಿಮಠ ಜಾತ್ರೆ ಆರಂಭವಾಗಿದೆ. ಶುಕ್ರವಾರ ಶ್ರೀಗಳು ಷಟಸ್ಥಲ ದ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.
ಹಾವೇರಿ ಹುಕ್ಕೇರಿಮಠ ಜಾತ್ರೆ ಆರಂಭ ಜಾತ್ರೆಯ ಅಂಗವಾಗಿ ಶಿವಬಸವ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಜಾತ್ರೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಚಾಲನೆ ನೀಡಿದರು. ಮೂರು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ಜರುಗಲಿದೆ.
ಮೂರನೇಯ ದಿನ ಹುಕ್ಕೇರಿಮಠದ ಪೂಜ್ಯದ್ವಯರಾದ ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಭಾವಚಿತ್ರದ ಮೆರವಣಿಗೆಯೊಂದಿಗೆ ಹುಕ್ಕೇರಿಮಠದ ಜಾತ್ರೆ ಮಹೋತ್ಸವ ಸಂಪನ್ನಗೊಳ್ಳಲಿದೆ. ಪ್ರಸ್ತುತ ವರ್ಷ ಕೊರೊನಾ ಇರುವ ಕಾರಣ ಸರಳ ರೀತಿಯಲ್ಲಿ ಜಾತ್ರೆ ಆಚರಿಸಲಾಗುತ್ತಿದೆ. ಉತ್ಸವವನ್ನ ಕೇವಲ 500 ಮೀಟರ್‌ಗೆ ಸೀಮಿತಗೊಳಿಸಲಾಗಿದೆ.
ಓದಿ : ನೇತಾಜಿ ಸುಭಾಷ್ ಚಂದ್ರ ಬೋಸ್ 125 ನೇ ಜನ್ಮದಿನ; ವೀರ ಸೇನಾನಿಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ