ಹಾವೇರಿ :ಉದ್ಘಾಟನೆಯಾಗಿ ವರ್ಷ ಕಳೆದರೂ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
2010ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಈಜುಕೊಳವನ್ನು ಉದ್ಘಾಟಿಸಿದ್ದರು. ಆದರೆ, ಸ್ವಿಮಿಂಗ್ ಪೂಲ್ ಅನೇಕ ಸಮಸ್ಯೆಗಳಿಂದ ಕೂಡಿತ್ತು. ಹಾಗಾಗಿ, ಜಿಲ್ಲಾಡಳಿತ ಈಜುಕೊಳದ ದುರಸ್ತಿಗೆ ಮುಂದಾಗಿತ್ತು.
ನಂತರ ಯುವಜನ ಮತ್ತು ಕ್ರೀಡಾ ಇಲಾಖೆ ಸುಪರ್ಧಿಯಲ್ಲಿ ಈಜುಕೊಳ ಕೆಲಕಾಲ ಚೆನ್ನಾಗಿ ನಡೆದಿದ್ದು ಬಿಟ್ಟರೆ ನಂತರ ಸ್ವಿಮ್ಮಿಂಗ್ ಪೂಲ್, ಸಾರ್ವಜನಿಕರಿಗೆ ತೆರೆದಿದ್ದೆ ಕಡಿಮೆ. ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈಜುಕೊಳವನ್ನು ಖಾಸಗಿಯವರಿಗೆ ನೀಡಲಾಗಿತ್ತು.
ಕೊರೊನಾ ಮೊದಲನೆ ಅಲೆ ವೇಳೆ ಈಜುಕೊಳವನ್ನು ಬಂದ್ ಮಾಡಲಾಗಿತ್ತು. ನಂತರ ಸರ್ಕಾರ ಅನುಮತಿ ನೀಡಿದರೂ ಮತ್ತೆ ದುರಸ್ತಿ ಮಾಡಿ ಆರಂಭಿಸುವ ಹೊತ್ತಿಗೆ ಕೊರೊನಾ ಎರಡನೇ ಅಲೆಯಿಂದ ಈಜುಕೊಳ ಮತ್ತೆ ಬಂದ್ ಆಯಿತು.
ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಖಾಸಗಿ ಈಜುಕೊಳಕ್ಕೆ ಅನುಮತಿ ಸಿಕ್ಕರೂ ಸಹ ಜಿಲ್ಲೆಯಲ್ಲಿರುವ ಮೂರು ಸರ್ಕಾರಿ ಈಜುಕೊಳಗಳಿಗೆ ಮಾತ್ರ ಅನುಮತಿ ಸಿಗಲಿಲ್ಲ. ಪರಿಣಾಮ ರಾಣೇಬೆನ್ನೂರು, ಹಾನಗಲ್ ಮತ್ತು ಜಿಲ್ಲೆಯ ಸ್ವಿಮ್ಮಿಂಗ್ ಪೂಲ್ಗಳು ಆರಂಭವಾಗಲೇ ಇಲ್ಲ.