ಕರ್ನಾಟಕ

karnataka

ETV Bharat / state

ಬಿಎಸ್​ವೈ ಸಂಪುಟದಲ್ಲಿ ಹಾವೇರಿಯ ಮೂವರಿಗೆ ಮಂತ್ರಿಗಿರಿ - ಆರ್. ಶಂಕರ್ ಗೆ ಸಚಿವ ಸ್ಥಾನ

ಶಿಗ್ಗಾಂವಿ ಸವಣೂರು ವಿಧಾನಸಭಾ ಪ್ರತಿನಿಧಿಸುವ ಬಸವರಾಜ್ ಬೊಮ್ಮಾಯಿಗೆ ಈಗಾಗಲೇ ಗೃಹಖಾತೆ ದೊರೆತಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದು ನಂತರ ಬಿಜೆಪಿಯಿಂದ ಆಯ್ಕೆಯಾಗಿರುವ ಬಿ.ಸಿ.ಪಾಟೀಲ್‌ಗೆ ಕೃಷಿ ಖಾತೆ ದೊರೆತಿದೆ. ವರಿಷ್ಠರ ಆಣತಿಯಂತೆ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಇದ್ದಿದ್ದರಿಂದ ಆರ್.ಶಂಕರ್‌ ಅವರನ್ನು ಪರಿಷತ್ ಸದಸ್ಯನಾಗಿ ಮಾಡಿ ಇದೀಗ ಸಚಿವ ಸ್ಥಾನ ನೀಡಿದ್ದಾರೆ.

three-minister-elected-to-cabinet-of-bsy
ಬಿಎಸ್​ವೈ ಸಂಪುಟದಲ್ಲಿ ಹಾವೇರಿಯ ಮೂವರಿಗೆ ಮಂತ್ರಿಗಿರಿ

By

Published : Jan 14, 2021, 10:10 PM IST

ಹಾವೇರಿ: ರಾಜ್ಯ ಸಚಿವ ಸಂಪುಟದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ದೊರೆತಿವೆ.

ಶಿಗ್ಗಾಂವಿ ಸವಣೂರು ವಿಧಾನಸಭಾ ಪ್ರತಿನಿಧಿಸುವ ಬಸವರಾಜ್ ಬೊಮ್ಮಾಯಿಗೆ ಈಗಾಗಲೇ ಗೃಹಖಾತೆ ದೊರೆತಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದು ನಂತರ ಬಿಜೆಪಿಯಿಂದ ಆಯ್ಕೆಯಾಗಿರುವ ಬಿ.ಸಿ.ಪಾಟೀಲ್‌ಗೆ ಕೃಷಿ ಖಾತೆ ದೊರೆತಿದೆ. ವರಿಷ್ಠರ ಅಣತಿಯಂತೆ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಇದ್ದಿದ್ದರಿಂದ ಆರ್. ಶಂಕರ್ ಗೆ ಪರಿಷತ್ ಸದಸ್ಯನಾಗಿ ಮಾಡಿ ಇದೀಗ ಸಚಿವ ಸ್ಥಾನ ನೀಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಸರ್ಕಾರದಲ್ಲಿ ಪರಿಸರ ಅರಣ್ಯಖಾತೆ ಸಚಿವರಾಗಿ ನಂತರ ಪೌರಾಡಳಿತ ಸಚಿವರಾಗಿದ್ದ ಆರ್. ಶಂಕರ್ ಬದಲಾದ ರಾಜಕಾರಣದಲ್ಲಿ ಕಮಲಪಡೆ ಸೇರಿದ್ದರು. ನಂತರ ರಾಣೆಬೆನ್ನೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಸ್ಪರ್ಧಿಸದಂತೆ ವರಿಷ್ಠರು ಹೇಳಿದಾಗ ಚುನಾವಣೆಗೆ ನಿಲ್ಲದಿದ್ದುದರಿಂದ ವರಿಷ್ಠರು ಅವರನ್ನು ಪರಿಷತ್ ಸದಸ್ಯನಾಗಿ ಮಾಡಿ ಇದೀಗ ಸಚಿವ ಸ್ಥಾನ ನೀಡಿದ್ದಾರೆ. ಇಷ್ಟು ದಿನ ಒಂದು ಅಥವಾ ಎರಡು ಸಚಿವ ಸ್ಥಾನ ಪ್ರತಿನಿಧಿಸುತ್ತಿದ್ದ ಹಾವೇರಿ ಜಿಲ್ಲೆಗೆ ಇದೀಗ ಮೂರು ಸಚಿವ ಸ್ಥಾನಗಳು ದೊರೆತಂತಾಗಿದೆ.

ಇದನ್ನೂ ಓದಿ:ಬಿಎಸ್​ವೈ ಸಂಪುಟದಲ್ಲಿ ಬೆಳಗಾವಿಗೆ ಜಾಕ್ ಪಾಟ್: ಗಡಿ ಜಿಲ್ಲೆಯ ಐವರಿಗೆ ಮಂತ್ರಿಗಿರಿ

ABOUT THE AUTHOR

...view details