ಕರ್ನಾಟಕ

karnataka

ETV Bharat / state

ಫೀವರ್​ ಕ್ಲಿನಿಕ್‌ನಲ್ಲಿ ರೈತ ಮುಖಂಡೆಯಿಂದ ದಬ್ಬಾಳಿಕೆ ಆರೋಪ - ಹಾವೇರಿ ಜಿಲ್ಲಾ ರೈತ ಸಂಘದ ಮಹಿಳಾ ಅಧ್ಯಕ್ಷೆ ಮಂಜುಳಾ ಅಕ್ಕಿ

ಮಂಜುಳಾ ಅಕ್ಕಿ ವರ್ತನೆಯಿಂದ ಪಾರ್ಮಾಸಿಸ್ಟ್​ ಅಂಜನಾ ಪಾಟೀಲ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಜಗಳ ಬಿಡಿಸಲು ಬಂದ ನರ್ಸ್ ಮೊಬೈಲ್ ಕಿತ್ತು ನೆಲ್ಲಕ್ಕೆ ಬಿಸಾಕುವ ಮೂಲಕ ರೈತ ಮುಖಂಡೆ ದರ್ಪ ತೋರಿದ್ದಾರೆ ಎಂದು ದೂರಲಾಗಿದೆ.

Haveri Fever Clinical Farmer Leader Oppression
ಹಾವೇರಿ ಫಿವರ್​ ಕ್ಲಿನಿಕ್

By

Published : Jun 13, 2020, 7:41 PM IST

ಹಾವೇರಿ: ಕರ್ತವ್ಯನಿರ್ವಹಿಸುತ್ತಿರುವ ವೈದ್ಯ ಸಿಬ್ಬಂದಿ ಮೇಲೆ ರೈತ ಮುಖಂಡೆ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿ ಬಂದಿದೆ. ಹಾವೇರಿ ಜಿಲ್ಲಾ ರೈತ ಸಂಘದ ಮಹಿಳಾ ಅಧ್ಯಕ್ಷೆ ಮಂಜುಳಾ ಅಕ್ಕಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ನಗರದ ಫೀವರ್ ಕ್ಲಿನಿಕ್‌ನಲ್ಲಿ ಕಿವಿನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ರೈತ ಮುಖಂಡೆ ಮಂಜುಳಾ ಅಕ್ಕಿ, ಮಾತ್ರೆಗಳನ್ನು ಸರಿಯಾಗಿ ಕೊಡಲಿಲ್ಲ ಎಂದು ಪಾರ್ಮಾಸಿಸ್ಟ್ ಅಂಜನಾ ಪಾಟೀಲ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಮಂಜುಳಾ ಅಕ್ಕಿ ವರ್ತನೆಯಿಂದ ಪಾರ್ಮಾಸಿಸ್ಟ್​ ಅಂಜನಾ ಪಾಟೀಲ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಜಗಳ ಬಿಡಿಸಲು ಬಂದ ನರ್ಸ್ ಮೊಬೈಲ್ ಕಿತ್ತು ನೆಲ್ಲಕ್ಕೆ ಬಿಸಾಕುವ ಮೂಲಕ ರೈತ ಮುಖಂಡೆ ದರ್ಪ ತೋರಿದ್ದಾರೆ ಎಂದು ದೂರಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಪ್ರಭಾವತಿ ಘಟನೆಯ ಕುರಿತು ವಿಚಾರಣೆ ನಡೆಸಿದರು. ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

For All Latest Updates

ABOUT THE AUTHOR

...view details