ಕರ್ನಾಟಕ

karnataka

ETV Bharat / state

ಸಿಗದ ಲಾಭ: ಕುರಿಗಳನ್ನು ಬಿಟ್ಟು ಮೆಣಸಿನಕಾಯಿ ಬೆಳೆ ಮೇಯಿಸಿದ ರೈತ - ಮೆಣಸಿನಕಾಯಿ ಬೆಳೆ ನಾಶ ಮಾಡಿದ ಹಾವೇರಿಯ ರೈತ

ಕಷ್ಟ ಪಟ್ಟು ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ ಹಾವೇರಿ ತಾಲೂಕಿನ ರೈತನೋರ್ವ ಕುರಿಗಳನ್ನು ಮೇಯಲು ಬಿಟ್ಟು ಬೆಳೆ ನಾಶ ಮಾಡಿದ್ದಾನೆ.

Haveri farmer destroyed the crop
ಮೆಣಸಿನಕಾಯಿ ಬೆಳೆ ನಾಶ ಮಾಡಿದ ಹಾವೇರಿಯ ರೈತ

By

Published : May 24, 2020, 10:40 AM IST

ಹಾವೇರಿ : ಸೂಕ್ತ ಬೆಲೆ ಸಿಗದ ಹಿನ್ನೆಲೆ ರೈತನೊಬ್ಬ ಕುರಿಗಳನ್ನು ಮೇಯಲು ಬಿಟ್ಟು ಮೆಣಸಿನಕಾಯಿ ಬೆಳೆಯನ್ನು ನಾಶ ಮಾಡಿದ ಘಟನೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸುರೇಶ್ ಪೂಜಾರ್ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದ. ಬೆಳೆಯೇನೋ ಚೆನ್ನಾಗಿ ಬಂದಿತ್ತು. ಆದರೆ, ಲಾಕ್ ಡೌನ್​ನಿಂದಾಗಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ರೈತ ಸುರೇಶ್​, ಜಮೀನಿಗೆ ಕುರಿಗಳನ್ನು ಮೇಯಲು ಬಿಟ್ಟು ಬೆಳೆ ನಾಶ ಮಾಡಿದ್ದಾನೆ.

ಮೆಣಸಿನಕಾಯಿ ಬೆಳೆ ನಾಶ ಮಾಡಿದ ಹಾವೇರಿಯ ರೈತ

ಜೊತೆಗೆ ರೋಟರ್ ಓಡಿಸಿ ಕಷ್ಟುಪಟ್ಟು ಬೆಳೆದಿದ್ದ ಬೆಳೆಯನ್ನು ನಾಶ ಮಾಡಿದ್ದಾನೆ. ಈ ಮೂಲಕ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾನೆ.

ABOUT THE AUTHOR

...view details