ಹಾವೇರಿ:ಜಿಲ್ಲೆಯಲ್ಲಿ ಸೋಮವಾರ 39 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಹಾವೇರಿ ಜಿಲ್ಲೆಯಲ್ಲಿ ಮತ್ತೆ 39 ಜನರಿಗೆ ಅಂಟಿದ ಕೊರೊನಾ - corona update
ಹಾವೇರಿ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ...

ಕೊರೊನಾ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,376 ಕ್ಕೇರಿದ್ದು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಸೋಮವಾರ 43 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 04, ಹಾನಗಲ್ ತಾಲೂಕಿನಲ್ಲಿ 12, ಹಾವೇರಿ ತಾಲೂಕಿನಲ್ಲಿ 05, ಹಿರೇಕೆರೂರು ತಾಲೂಕಿನಲ್ಲಿ 06, ರಾಣೆಬೆನ್ನೂರು ತಾಲೂಕಿನಲ್ಲಿ 09, ಶಿಗ್ಗಾವಿ ತಾಲೂಕಿನಲ್ಲಿ 03 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 278 ಜನ ಹೋಂ ಐಸೋಲೇಷನ್ನಲ್ಲಿದ್ದು, 70 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.