ಕರ್ನಾಟಕ

karnataka

ETV Bharat / state

ಜೀವಂತವಾಗಿ ನನ್ನ ಮಗನಂತೂ ಬರಲಿಲ್ಲ, ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ದೇಶಕ್ಕೆ ಕರೆ ತನ್ನಿ: ಮೃತ ನವೀನ್ ತಂದೆಯ ಮನವಿ‌‌ - ಉಕ್ರೇನ್‌ನಲ್ಲಿ ಹಾವೇರಿ ಮೂಲದ ನವೀನ್‌ ಸಾವು

ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ, ಹಾಲಿ ಸಿಎಂ ಎಲ್ಲರೂ ನಮ್ಮ ಜೊತೆ ಮಾತಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳನ್ನು ಸೇಫ್ ಆಗಿ ಭಾರತಕ್ಕೆ ಕರೆ ತನ್ನಿ ಅಂತ ನಾನು ಮೋದಿಯವರಿಗೆ ರಿಕ್ವೆಸ್ಟ್ ಮಾಡಿದ್ದೇನೆ ಎಂದು ಮೃತ ನವೀನ್‌ ತಂದೆ ಹೇಳಿದ್ದಾರೆ.

haveri district resident Naveen's father reaction to death in Ukraine
ಜೀವಂತವಾಗಿ ನನ್ನ ಮಗ ಬರಲಿಲ್ಲ, ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ದೇಶಕ್ಕೆ ಕರೆ ತನ್ನಿ: ಮೃತ ನವೀನ್ ತಂದೆಯ ಮನವಿ‌‌

By

Published : Mar 2, 2022, 10:25 AM IST

Updated : Mar 2, 2022, 10:45 AM IST

ಹಾವೇರಿ:ಜೀವಂತವಾಗಿ ದೇಶಕ್ಕೆ ನನ್ನ ಮಗ ಬರಲಿಲ್ಲ. ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ಕರೆ ತನ್ನಿ ಎಂದು ಮೃತ ನವೀನ್ ತಂದೆ ಶೇಖಪ್ಪ ಗ್ಯಾನಗೌಡರ್ ಮನವಿ‌‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ತಮ್ಮ ನಿವಾಸದ ಮುಂದೆ ಮಾತನಾಡಿದ ಅವರು, ನಿನ್ನೆ ಪ್ರಧಾನಿ ಮೋದಿ, ಮಾಜಿ ಸಿಎಂ, ಹಾಲಿ ಸಿಎಂ ಎಲ್ಲರೂ ನಮ್ಮ ಜೊತೆ ಮಾತಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳನ್ನು ಸೇಫ್ ಆಗಿ ಕರೆ ತನ್ನಿ ಅಂತ ನಾನು ಮೋದಿಯವರಿಗೆ ಮನವಿ ಮಾಡಿದ್ದೇನೆ. ನಿನ್ನೆ ಸಾಕಷ್ಟು ಅಧಿಕಾರಿಗಳು, ಮುಖಂಡರು ಬಂದು ಮಾತನಾಡಿದ್ದಾರೆ ಎಂದು ಹೇಳಿದರು.

ಜೀವಂತವಾಗಿ ನನ್ನ ಮಗನಂತೂ ಬರಲಿಲ್ಲ, ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ದೇಶಕ್ಕೆ ಕರೆ ತನ್ನಿ: ಮೃತ ನವೀನ್ ತಂದೆಯ ಮನವಿ‌‌

ಉಳಿದ ವಿದ್ಯಾರ್ಥಿಗಳು ಬಂಕರ್ ನಿಂದ ಹೊರ ಬರೋಕೆ ಹೆದರುತ್ತಿದ್ದಾರೆ. ಮಗನನ್ನು ಯಾವಾಗ ಕರೆಸ್ತೀರಿ ಅಂದಾಗ ಮೊದಲು ಎಲ್ಲರೂ ಕೇವಲ ಆಶ್ವಾಸನೆ ಕೊಡ್ತಾ ಇದ್ದರು, ಅದು ಆಶ್ವಾಸನೆಯಾಗಿಯೇ ಉಳಿಯಿತು. ಇನ್ನು ಅವನು ಬರೋದು ಯಾರಿಂದ ತಪ್ಪಿತು, ಯಾರಿಂದ ಆಯ್ತು ಅಂತ ನಂಗೆ ಗೊತ್ತಾಗಲಿಲ್ಲ, ಪೋಲೆಂಡ್, ರೊಮೇನಿಯಾ ಮೂಲಕ ಅವನು ಬರಬೇಕಿತ್ತು.

ಜೀವ ರಕ್ಷಣೆಗೆ ಅಂತ ಬಹಳ ಪ್ರಯತ್ನ ಮಾಡಿದ್ರು ನನ್ನ ಮಗ, ಬಂಕರ್ ನಲ್ಲಿ ಇದ್ದರೂ ಕಷ್ಟ, ಹೊರ ಬಂದ್ರೂ ಕಷ್ಟ ಅಂತ ಅವರು ಒದ್ದಾಡಿದ್ದಾರೆ. ಯುದ್ದ ಆಗೋದು ಸುಳ್ಳು, ಧೈರ್ಯವಾಗಿರಿ ಅಂತ ಕಾಲೇಜಿನವರು ಹೇಳಿದ್ದರಂತೆ. ಯುದ್ದ ಆಗಲ್ಲ ಅನ್ನೋ ವಿಶ್ವಾಸದಲ್ಲಿ ಎಲ್ಲರೂ ಇದ್ದರು, ಆದರೆ ಇಲ್ಲಿನ ರಾಜಕೀಯ, ರಿಸರ್ವೇಶನ್, ಶಿಕ್ಷಣ ಪದ್ದತಿ ಸರಿ ಇಲ್ಲದ ಕಾರಣ ನಮ್ಮ ಮಗ ಇಲ್ಲಿ ಓದೋಕೆ ಆಗಲಿಲ್ಲ. ಹೀಗಾಗಿ ಉಕ್ರೇನ್‌ಗೆ ತೆರಳಬೇಕಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಉಕ್ರೇನ್​ನಲ್ಲಿ ನವೀನ್​ ಸಾವು: ಸಂಬಂಧಿ ಹೇಳಿದ್ದಿಷ್ಟು

Last Updated : Mar 2, 2022, 10:45 AM IST

ABOUT THE AUTHOR

...view details