ಹಾವೇರಿ : ಜಿಲ್ಲೆಯಲ್ಲಿ ಸೋಮವಾರ 19 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತಂತೆ ಹಾವೇರಿ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10395 ಕ್ಕೇರಿದಂತಾಗಿದೆ.
ಹಾವೇರಿ: 19 ಮಂದಿಗೆ ಕೊರೊನಾ ಪಾಸಿಟಿವ್ - Haveri District News
ಹಾವೇರಿ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ...
ಸಂಗ್ರಹ ಚಿತ್ರ
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಸೋಮವಾರ 51 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 01, ಹಾನಗಲ್ ತಾಲೂಕಿನಲ್ಲಿ 04, ಹಾವೇರಿ ತಾಲೂಕಿನಲ್ಲಿ 05, ರಾಣೆಬೆನ್ನೂರು ತಾಲೂಕಿನಲ್ಲಿ 06, ಸವಣೂರು ತಾಲೂಕಿನಲ್ಲಿ 02 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ 255 ಜನ ಹೋಂ ಐಸೋಲೇಷನ್ನಲ್ಲಿದ್ದು 61 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated : Oct 27, 2020, 8:54 PM IST