ಸವಣೂರು(ಹಾವೇರಿ):ಅಪ್ರಾಪ್ತ ಬಾಲಕಿ ಜೊತೆತಾಲೂಕಿನ ತೆಗ್ಗಿಹಳ್ಳಿಯ ಮಂಜುನಾಥ್ ವಿವಾಹವನ್ನು ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹಾವೇರಿ ನಗರದ ಬಾಲಕಿಗೆ 16 ವರ್ಷ ಆಗಿರುವುದರಿಂದ ಆಕೆಯನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ.
ಅನ್‌ಲಾಕ್ ವೇಳೆ ಬಾಲ್ಯ ವಿವಾಹಕ್ಕೆ ಯತ್ನ; ಇಂದು ನಡೆಯಬೇಕಿದ್ದ ಮದುವೆ ರದ್ದು - ಹಾವೇರಿ
ಮಂಜುನಾಥ್ ಎಂಬ ವ್ಯಕ್ತಿ ಜೊತೆ 16 ವರ್ಷದ ಬಾಲಕಿಗೆ ಇಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅನ್‌ಲಾಕ್ ವೇಳೆ ಬಾಲ್ಯ ವಿವಾಹಕ್ಕೆ ಯತ್ನ; ಇಂದು ನಡೆಯಬೇಕಿದ್ದ ಮದುವೆ ರದ್ದು
ಎರಡು ಕಡೆಯ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಒಂದು ವೇಳೆ ಬಾಲ್ಯ ವಿವಾಹ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.