ಹಾವೇರಿ: 'ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್' ಎಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಗೊರವಯ್ಯ ಕಾರ್ಣಿಕ ನುಡಿಯಲಾಗಿದೆ.
'ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್', ಕಾರ್ಣಿಕ ನುಡಿದ ದೇವರಗುಡ್ಡ ಗೊರವಯ್ಯ
ಕೊರೊನಾ ಎಂಬ ರೋಗ ದೂರವಾಗಿ ಸೃಷ್ಟಿಯಲ್ಲಿ ಸಿರಿ ಆಗಲಿದೆ. ರಾಜಕೀಯವಾಗಿ ಡೋಲಾಯಮಾನ ಸ್ಥಿತಿ ಸುಧಾರಣೆ ಆಗಲಿದೆ. ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಲಿದೆ ಎಂದು ಕಾರ್ಣಿಕ ನುಡಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ವಿಶ್ಲೇಷಿಸಿದ್ದಾರೆ.
'ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್', ಕಾರ್ಣಿಕ ನುಡಿದ ದೇವರಗುಡ್ಡ ಗೊರವಯ್ಯ...
ವರ್ಷದ ಭವಿಷ್ಯವಾಣಿ ಎಂದೇ ನಂಬಲಾಗಿರೋ ಕಾರ್ಣಿಕದಲ್ಲಿ, ಹನ್ನೊಂದು ಅಡಿ ಎತ್ತರದ ಬಿಲ್ಲನ್ನೇರಿ ನಾಗಪ್ಪಜ್ಜ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಪ್ರತಿ ವರ್ಷ ವಿಜಯ ದಶಮಿ ಹಬ್ಬದಲ್ಲಿ ಮಾಲತೇಶ ದೇವರ ಕಾರ್ಣಿಕ ನಡೆಯಲಿದ್ದು, ಸಾವಿರಾರು ಭಕ್ತರು ಭಾಗಿಯಾಗುತ್ತಾರೆ.
ಕೊರೊನಾ ಎಂಬ ರೋಗ ದೂರವಾಗಿ ಸೃಷ್ಟಿಯಲ್ಲಿ ಸಿರಿ ಆಗಲಿದೆ. ರಾಜಕೀಯವಾಗಿ ಡೋಲಾಯಮಾನ ಸ್ಥಿತಿ ಸುಧಾರಣೆ ಆಗಲಿದೆ. ಯಡಿಯೂರಪ್ಪ ಸರಕಾರ ಸುಭದ್ರವಾಗಿರಲಿದೆ ಎಂದು ಕಾರ್ಣಿಕ ನುಡಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ವಿಶ್ಲೇಷಿಸಿದ್ದಾರೆ.