ಕರ್ನಾಟಕ

karnataka

ETV Bharat / state

ಮಳೆಯ ಜೂಜಾಟಕ್ಕೆ ಕಂಗಾಲಾದ ರೈತ: ಕೈಗೆ ಬಂದ ತುತ್ತು ಬಾಯಿಗೆ ಬರದೇ ನಿರಾಸೆ - ಬೆಳೆ ನಾಶ

ಕೃಷಿ ಮಳೆಯ ಜೊತೆಗಿನ ಜೂಜಾಟ ಅಂತಾರೆ ಈ ಜೂಜಾಟದಲ್ಲಿ ರೈತ ಸೋಲೇ ಹೆಚ್ಚು. ಹೋದ ವರ್ಷದ ಮಳೆಗೆ ಉಂಟಾದ ಹಾನಿಯಿಂದ ರೈತ ಚೇತರಿಸಿ ಕೊಂಡು ಈ ಬಾರಿ ಮತ್ತೆ ಬಿತ್ತಿ ಬೆಳೆಗಾಗಿ ಕಾಯುತ್ತಿದ್ದಾಗ ಮತ್ತೆ ಬಂದ ಪೂರ್ವ ಮುಂಗಾರು ರೈತನನ್ನು ಕಂಗಾಲಾಗಿಸಿದೆ. ಬೆಳೆದ ಬೆಳೆ ಜಮೀನಿನಲ್ಲೇ ಕೊಳೆಯುತ್ತಿರುವುದನ್ನು ಕಂಡು, ರೈತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ದುಃಖಿಸುತ್ತಿದ್ದಾನೆ.

haveri destroy crop in Eastern monsoon
ಮಳೆಯ ಜೂಜಾಟಕ್ಕೆ ಕಂಗಾಲಾದ ರೈತ: ಕಯಗೆ ಬಂದ ತುತ್ತು ಬಾಯಿಗೆ ಬರದೇ ನಿರಾಸೆ

By

Published : May 24, 2022, 9:11 PM IST

ಹಾವೇರಿ:ಜಿಲ್ಲೆಯ ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಯಾಗಿತ್ತು. ಆದರೆ, ಹಲವು ಕಾರಣಾಂತರಗಳಿಂದ ಜಿಲ್ಲೆಯ ರೈತರು ಹತ್ತಿಯಿಂದ ಬೆಳೆಯಿಂದ ಮೆಕ್ಕೆಜೋಳ ಸೋಯಾಬೀನ್ ಬೆಳೆಗಳತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದ ರೈತರು ನಂತರ ಹಿಂಗಾರಿನಲ್ಲಿ ಸಹ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಳೆಯಲಾರಂಭಿಸಿದ್ದಾರೆ.

ಮೆಕ್ಕೆಜೋಳ ಮತ್ತು ಸೋಯಾಬೀನ್ ರೈತರಿಗೆ ಆದಾಯದ ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸುತ್ತವೆ. ಆದರೆ, ಕಳೆದ ಮುಂಗಾರಿನಲ್ಲಿ ಸುರಿದ ಮಳೆರಾಯ ಮುಂಗಾರಿನಲ್ಲಿ ಬೆಳೆದು ನಿಂತಿದ್ದ ಸೋಯಾಬೀನ್ ಮತ್ತು ಮೆಕ್ಕೆಜೋಳ ಹಾಳು ಮಾಡಿದ್ದ. ಇದೀಗ ಹಿಂಗಾರಿನಲ್ಲಿ ಬೆಳೆದ ಮೆಕ್ಕೆಜೋಳ ಸೋಯಾಬೀನ್ ಇನ್ನೇನು ಕೈಗೆ ಬಂತು ಎನ್ನುವಷ್ಟರಲ್ಲಿ ಮುಂಗಾರು ಪೂರ್ವ ಮಳೆ ರೈತರಿಗೆ ಮತ್ತೆ ನಿರಾಸೆ ತಂದಿದೆ.

ಮಳೆಯ ಜೂಜಾಟಕ್ಕೆ ಕಂಗಾಲಾದ ರೈತ: ಕಯಗೆ ಬಂದ ತುತ್ತು ಬಾಯಿಗೆ ಬರದೇ ನಿರಾಸೆ

ಜಮೀನಿನಲ್ಲಿ ರಾಶಿ ಹಾಕಲಾಗಿದ್ದ ಮೆಕ್ಕೆಜೋಳದ ತೆನೆಗಳು ಕೊಳೆತಿದ್ದು, ಅಲ್ಲೇ ಮೊಳಕೆಯಾಗುತ್ತಿದೆ. ಇನ್ನೊಂದಡೆ ಸೋಯಾಬೀನ್ ಜಮೀನಿನಲ್ಲಿ ಕೊಳೆದು ಹೋಗುತ್ತಿದೆ. ಒಂದು ಕಡೆ ನಮಗೆ ಧಾನ್ಯಗಳು ಸಿಗುತ್ತಿಲ್ಲ, ಮತ್ತೊಂದು ಕಡೆ ನಮ್ಮ ರಾಸುಗಳಿಗೆ ಮೇವು ಸಹ ಇಲ್ಲ. ಮುಂಗಾರಿನಲ್ಲಿ ಆದ ಹಾನಿಯನ್ನು ಹಿಂಗಾರಿನ ಬೆಳೆಯಲ್ಲಿ ತಗೆದುಕೊಳ್ಳುವ ಉತ್ಸಾಹದಲ್ಲಿದ್ದೆವು, ಆದರೆ, ಮೂರು ದಿನ ಸುರಿದ ಮಳೆ ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿದೆ ಎನ್ನುತ್ತಿದ್ದಾರೆ ರೈತರು.

ಬಿತ್ತನೆಬೀಜ, ಗೊಬ್ಬರ ಕೂಲಿ ಕಾರ್ಮಿಕರು ಸೇರಿದಂತೆ ಎಕರೆಗೆ 30 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇವೆ. ಆದರೆ, ಮಳೆ ಬಂದು ಎಲ್ಲವನ್ನು ಹಾಳು ಮಾಡಿತು. ಸರ್ಕಾರ ಅಧಿಕಾರಿಗಳು ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಭರವಸೆ ನೀಡುತ್ತಾರೆ. ಆದರೆ, ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇತ್ತ ಮುಖ ಮಾಡಿಲ್ಲ. ಗ್ರಾಮದಲ್ಲಿರುವ ಅಧಿಕಾರಿಗಳು ಸಹ ಜಮೀನಿಗೆ ಕಾಲಿಟ್ಟಿಲ್ಲ ನಮ್ಮ ಕಷ್ಟ ಕೇಳಿಲ್ಲಾ ಎನ್ನುತ್ತಾರೆ ರೈತರು.

ಇದನ್ನೂ ಓದಿ:ಎಂಎಲ್ಸಿ ಟಿಕೆಟ್ ತಪ್ಪಿದ್ರೆ ಏನಂತೆ, ವರುಣಾಗೆ ಬಂದು ಸ್ಫರ್ಧಿಸಲಿ: ಹರ್ಷವರ್ಧನ್ ಆಹ್ವಾನ ನೀಡಿದ್ದು ಯಾರಿಗೆ?

ABOUT THE AUTHOR

...view details