ಹಾವೇರಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಎರಡು ಪ್ರತ್ಯೇಕ ಪ್ರಕರಣ: ಹಾವೇರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು.. - ಹಾವೇರಿ ಲೆಟೆಸ್ಟ್ ಕ್ರೈಂ ನ್ಯೂಸ್
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಸಾಗರ ಗಾಳೆಪ್ಪನವರ ಹಾಗೂ ರೆಹಮಾನ್ ನೆಲೋಗಲ್ ಮೃತರು ಎಂದು ಗುರುತಿಸಲಾಗಿದೆ.
ಸಾಗರ ಗಾಳೆಪ್ಪನವರ(18) ಹಾಗೂ ರೆಹಮಾನ್ ನೆಲೋಗಲ್ (30) ಮೃತರು ಎಂದು ಗುರುತಿಸಲಾಗಿದೆ. ಸಾಗರ ಗಾಳೆಪ್ಪನವರ ಅವರು ನಗರದ ಹೊರ ವಲಯದಲ್ಲಿರೋ ಹೆಗ್ಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ರೆ, ರೆಹಮಾನ್, ಹಾವೇರಿ ತಾಲೂಕಿನ ಕೆರಿಮತ್ತೀಹಳ್ಳಿ ಗ್ರಾಮದ ಬಳಿಯಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಮೃತದೇಹಗಳನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ದಾಖಲಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎರಡು ಪ್ರಕರಣಗಳು ನಡೆದಿವೆ.