ಕರ್ನಾಟಕ

karnataka

ETV Bharat / state

ಲೋಕಾಯುಕ್ತ ಬಲೆಗೆ ಡಿಡಿಪಿಐ, ಎಸ್​ಡಿಎ: ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ - ಡಿಡಿಪಿಐ ಕಚೇರಿ

ನಿವೃತ್ತ ಶಿಕ್ಷಕನಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಅವರನ್ನು ಲೋಕಾಯುಕ್ತರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

Haveri district DDPI, SDA in the trap of Lokayukta
ಲೋಕಾಯುಕ್ತರ ಬಲೆಗೆ ಹಾವೇರಿ ಜಿಲ್ಲಾ ಡಿಡಿಪಿಐ, ಎಸ್​ಡಿಎ

By

Published : Jul 21, 2023, 10:57 PM IST

ಹಾವೇರಿ:ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲಿ ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಎಸ್​ಡಿಎ ಸಿಬ್ಬಂದಿಯೊಬ್ಬರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಏಳು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ತಕ್ಷಣ ಡಿಡಿಪಿಐ ಮತ್ತು ಎಸ್ ಡಿಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದರು. ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಅವರ ಫೈಲ್ ಅನ್ನು ಎಜಿ ಕಚೇರಿಗೆ ಕಳಿಸಲು ಡಿಡಿಪಿಐ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ರಟ್ಟಿಹಳ್ಳಿ ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಎಂಬುವರ ಬಳಿ 7 ಸಾವಿರ ರೂಪಾಯಿ ಲಂಚವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ಮಾಡಿ, ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಅವರನ್ನು ಬಲೆಗೆ ಕೆಡವಿದ್ದಾರೆ.

ನಿವೃತ್ತ ಶಿಕ್ಷಕ ನಿಖರ ಮಾಹಿತಿ ನೀಡಿದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಹಾವೇರಿ ಲೋಕಾಯುಕ್ತ ಕಚೇರಿಯಲ್ಲಿ ಡಿಡಿಪಿಐ,ಎಸ್​ಡಿಎ ಲಂಚ ಸ್ವೀಕರಿಸುವ ಕುರಿತು ಪ್ರಕರಣ ದಾಖಲಾಗಿದೆ. ಎಸ್‌ಡಿಎ ದತ್ತಾತ್ರೇಯ ಕುಂಟೆ ಸಿಬ್ಬಂದಿ ಡಿಡಿಪಿಐಗೆ ಲಂಚ ಪಡೆಯಲು ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.

ಈ ಹಿಂದೆ ಹಾವೇರಿ ಜಿಲ್ಲೆಯ ಡಿಡಿಪಿಐ ಆಗಿದ್ದ ಅಂದಾನೆಪ್ಪ ವಡಗೇರಿ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದ್ದರು. ನಂತರ ಈ ವರ್ಷದ ಶೈಕ್ಷಣಿಕ ವರ್ಷಕ್ಕೆ ಮತ್ತೆ ಹಾವೇರಿ ಜಿಲ್ಲೆಯ ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿಂದೆ ಇದ್ದಾಗ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಅಂದಾನೆಪ್ಪ ಮತ್ತೆ ಹಾವೇರಿ ಜಿಲ್ಲೆಗೆ ಡಿಡಿಪಿಐ ಆಗಿ ಬಂದಿದ್ದಕ್ಕೆ ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದರು. ಹಾವೇರಿ ಡಿಡಿಪಿಐ ಆಗಿ ಎರಡ್ಮೂರು ತಿಂಗಳಲ್ಲಿ ಡಿಡಿಪಿಐ ಅಂದಾನೆಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಿಡಿಪಿಐ ಕಚೇರಿ, ಆರೋಪಿತರ ಮನೆಗಳಲ್ಲಿ ಶೋಧ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯ ಇಬ್ಬರನ್ನೂ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಡಾ.ಚಂದ್ರಶೇಖರ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ - ಬೀದರ್​: ತಾಲೂಕಿನ ಹಳ್ಳಿಖೇಡ್ (ಕೆ) ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಲೆಯ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಂಭೀರ ಸ್ವರೂಪದ ಆರೋಪ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಐದು ಜನ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿದ್ದರು. ಈ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರಿನ ಮೇಲೆ ಚಿಟಗುಪ್ಪ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಶ್ರೀಗಂಧದ ಮರಗಳ್ಳರು ಅಂದರ್​: ಆರೋಪಿಗಳಿಂದ 4.52 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ..

ABOUT THE AUTHOR

...view details