ಹಾವೇರಿ: ಇಲ್ಲಿನ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಶುಕ್ರವಾರ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ಮೂಲ ಸೌಕರ್ಯ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುರಿತಂತೆ ಪರಿಶೀಲನೆ ನಡೆಸಿದರು.
ಶಾಲಾ ಮಕ್ಕಳಿಗೆ ಸರ್ಪ್ರೈಸ್, ಪಾಠ ಮಾಡಿ, ಸಹಭೋಜನ ಸವಿದ ಡಿಸಿ - Residential School
ಜಿಲ್ಲಾಧಿಕಾರಿಯೊಬ್ಬರು ವಸತಿ ಶಾಲೆಯೊಂದಕ್ಕೆ ಅನಿರೀಕ್ಷಿತ ಭೇಟಿ ಮಕ್ಕಳ ಮನ ಗೆದ್ದಿದ್ದಾರೆ. ಭೇಟಿ ಕೊಟ್ಟಿದ್ದು ಅಷ್ಟೇ ಅಲ್ಲದೇ ವಸತಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಮನಾಗಿ ಕುಳಿತು ಊಟ ಸಹ ಸವಿದರು. ಇವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸಹಭೋಜನ ಸವಿದ ಜಿಲ್ಲಾಧಿಕಾರಿ
ಇದೇ ವೇಳೆ ಶಾಲಾ ಮಕ್ಕಳಿಗೆ ಪಾಠ ಮಾಡಿದ ಡಿಸಿ ಕೃಷ್ಣ ಬಾಜಪೇಯಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಕುಳಿತು ಸಹ ಭೋಜನ ಸವಿದರು. ಶಾಲೆಯಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುರಿತಂತೆ ಪರಿಶೀಲನೆ ನಡೆಸಿ ಶಾಲಾ ಶಿಕ್ಷಕರಿಂದ ಮಾಹಿತಿ ಪಡೆದರು.
ಶಾಲಾ ಮಕ್ಕಳ ಕಲಿಕಾ ಆಸಕ್ತಿ ಕಂಡು ಪ್ರಶ್ನೋತ್ತರ ಸಂವಾದಲ್ಲಿಯೂ ಪಾಲ್ಗೊಂಡರು. ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವಸತಿ ಶಾಲೆಯ ಅಡುಗೆಯವರು ತಯಾರಿಸಿದ ಚಪಾತಿ, ಪಲ್ಯ, ಅನ್ನ -ಸಂಬಾರ್ ಸವಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯ ನಡೆಕಂಡು ಅಲ್ಲಿನ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.