ಹಾವೇರಿ:ಪ್ರತಿವರ್ಷ ನಡೆಯುವ ದಾನಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಟ್ರಸ್ಟ್ವತಿಯಿಂದ ವೃದ್ದಾಶ್ರಮದ ವಯೋವೃದ್ದರನ್ನ ಕರೆದು ಸನ್ಮಾನಿಸುತ್ತಿದೆ. ಈ ವರ್ಷವು ಸಹ 20 ಜನರಿಗೆ ಟ್ರಸ್ಟ್ ದೇವಸ್ಥಾನಕ್ಕೆ ಕರೆಸಿ ಸನ್ಮಾನಿಸಿತು. ವಯೋವೃದ್ದರನ್ನ ಒಂದಡೆ ಕುಳ್ಳಿರಿಸಿ ಸೀರೆ ಸೇರಿದಂತೆ ಹೊಸ ಉಡುಪುಗಳನ್ನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ, ‘12ನೇ ಶತಮಾನದಲ್ಲಿ ಶರಣೆ ದಾನಮ್ಮ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು, ಅವರು ಸಾಮೂಹಿಕ ವಿವಾಹ, ದಾಸೋಹ ಮತ್ತು ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದವರ ಸೇವೆ ಮಾಡಿದ್ದಳು. ವೃದ್ಧಾಶ್ರಮದಲ್ಲಿ ವಯೋವೃದ್ದರು ದೇವಸ್ಥಾನ ಸೇರಿದಂತೆ ಇತರೆಡೆ ಹೋಗುವುದು ವಿರಳ’. ಹೀಗಾಗಿ ಅವರನ್ನ ಕರೆಸಿ ದೇವಿಯ ದರ್ಶನ ಮಾಡಿಸಿ ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.