ಹಾವೇರಿ: ಜಿಲ್ಲೆಯಲ್ಲಿ ಬುಧವಾರ 64 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 9,437 ಕ್ಕೇರಿದೆ.
ಹಾವೇರಿಯಲ್ಲಿಂದು 64 ಹೊಸ ಕೊರೊನಾ ಪ್ರಕರಣ; 9,437 ಕ್ಕೇರಿದ ಸೋಂಕಿತರು - ಹಾವೇರಿ ಕೊರೊನಾ ಸುದ್ದಿ
ಹಾವೇರಿಯಲ್ಲಿಂದು 64 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9,437 ಕ್ಕೇರಿದೆ.
ಹಾವೇರಿ
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬುಧವಾರ 294 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 07, ಹಾನಗಲ್ ತಾಲೂಕಿನಲ್ಲಿ 12, ಹಾವೇರಿ 17, ಹಿರೇಕೆರೂರು 01, ರಾಣೆಬೆನ್ನೂರು19, ಸವಣೂರು 06, ಶಿಗ್ಗಾಂವಿ ತಾಲೂಕಿನಲ್ಲಿ 02 ಜನರಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲಾಡಳಿತ ಎರಡು ಮರಣಗಳನ್ನ ದೃಢೀಕರಿಸಿದ್ದು ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 176 ಕ್ಕೇರಿದಂತಾಗಿದೆ.
ಇನ್ನು 719 ಜನ ಹೋಂ ಐಸೋಲೇಷನ್ನಲ್ಲಿದ್ದು 235 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.