ಹಾವೇರಿ:ಜಿಲ್ಲೆಯಲ್ಲಿ ಭಾನುವಾರ 300 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲಾಡಳಿತ ಈ ಕುರಿತಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5456 ಕ್ಕೇರಿದಂತಾಗಿದೆ.
ಹಾವೇರಿಯಲ್ಲಿಂದು 300 ಹೊಸ ಸೋಂಕಿತ ಪ್ರಕರಣಗಳು ಪತ್ತೆ! - ಹಾವೇರಿಯಲ್ಲಿ ಗುಣಮುಖರಾದವರ ಸಂಖ್ಯೆ
ಹಾವೇರಿ ಜಿಲ್ಲಾಧಿಕಾರಿ ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಅದರಲ್ಲಿ ಇಂದು ಸುಮಾರು 300 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇಂದು 214 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು 214 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಾನಗಲ್ ತಾಲೂಕಿನಲ್ಲಿ 21 , ಬ್ಯಾಡಗಿ ತಾಲೂಕಿನಲ್ಲಿ 26, ಹಾವೇರಿ ತಾಲೂಕಿನಲ್ಲಿ 60 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಾಣೆಬೆನ್ನೂರು ತಾಲೂಕಿನಲ್ಲಿ 72
ಶಿಗ್ಗಾಂವಿ ತಾಲೂಕಿನಲ್ಲಿ 41 ಹಾಗೂ ಸವಣೂರು ತಾಲೂಕಲ್ಲಿ 14 , ಹಿರೇಕೆರೂರು ತಾಲೂಕಿನಲ್ಲಿ 51 ಹಾಗೂ
ಇತರ ಜಿಲ್ಲೆಯ 15 ಜನರಿಗೆ ಕೊರೊನಾ ತಗುಲಿದೆ.
ಜಿಲ್ಲೆಯಲ್ಲಿ ಇಂದು ಕೊರೊನಾದಿಂದ ಮೃತಪಟ್ಟವರ ಬಗ್ಗೆ ಜಿಲ್ಲಾಡಳಿತ ದೃಢೀಕರಿಸಿಲ್ಲ.ಇನ್ನು ಜಿಲ್ಲೆಯಲ್ಲಿ 1263 ಜನರು ಹೋಂ ಐಸೋಲೇಷನ್ನಲ್ಲಿದ್ದು 399 ಜನ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.