ಹಾವೇರಿ : ಜಿಲ್ಲೆಯಲ್ಲಿ ಇಂದು 56 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1242 ಕ್ಕೇರಿದೆ.
ಕೊರೊನಾ ಕೌಂಟ್: ಹಾವೇರಿ ಜಿಲ್ಲೆಯಲ್ಲಿ 56 ಸೋಂಕಿತರು ಪತ್ತೆ - ಕೋವಿಡ್ ವರದಿ
ಹಾವೇರಿ ಜಿಲ್ಲೆಯಲ್ಲಿ ಇಂದು 56 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 54 ಜನ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಎಸ್ಬಿ ಶೆಟ್ಟಣ್ಣನವರ್
54 ಸೋಂಕಿತರು ಗುಣಮುಖರಾಗಿದ್ದಾರೆ. ಹಾವೇರಿ ತಾಲೂಕಿನಲ್ಲಿ 21, ರಾಣೆಬೆನ್ನೂರು ತಾಲೂಕಿನಲ್ಲಿ 14, ಶಿಗ್ಗಾವಿ ತಾಲೂಕಿನಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಹಿರೇಕೆರೂರು ತಾಲೂಕಿನಲ್ಲಿ 6, ಬ್ಯಾಡಗಿ ತಾಲೂಕಿನಲ್ಲಿ 4, ಸವಣೂರು ತಾಲೂಕಿನಲ್ಲಿ 2, ಹಾನಗಲ್ ತಾಲೂಕಿನಲ್ಲಿ ಒಂದು ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಇದುವರೆಗೂ 658 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದು 555 ಜನ ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಒಂದು ಸಾವು ವರದಿಯಾಗಿದ್ದು ಮೃತರ ಸಂಖ್ಯೆ 29 ಕ್ಕೇರಿದೆ.