ಹಾವೇರಿ:ಜಿಲ್ಲೆಯಲ್ಲಿ ಇಂದು 31 ಜನರಿಗೆ ಕೊರೊನಾ ದೃಢಪಟ್ಟಿದ್ದು, ಹಿರೆಕೇರೂರು ತಾಲೂಕು ಒಂದರಲ್ಲೇ 16 ಜನರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.
ಹಾವೇರಿ: 31 ಕೊರೊನಾ ಪ್ರಕರಣ ಪತ್ತೆ, ಹಿರೇಕೆರೂರಲ್ಲಿ ಒಂದೇ ದಿನ 16 ಪ್ರಕರಣ - ಹಾವೇರಿ ಕೊರೊನಾ
ಬುಧವಾರ 31 ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಹಿರೆಕೇರೂರು16, ಹಾವೇರಿ 1, ಹಾನಗಲ್ 4, ಸವಣೂರ 2, ಶಿಗ್ಗಾಂವ 4, ರಾಣೆಬೆನ್ನೂರ 3 ಮತ್ತು ಬ್ಯಾಡಗಿಯಲ್ಲಿ ಒಂದು ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ.
ಕೊರೊನಾ
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಬುಧವಾರ 31 ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಹಿರೆಕೇರೂರು16, ಹಾವೇರಿ 1, ಹಾನಗಲ್ 4, ಸವಣೂರ 2, ಶಿಗ್ಗಾಂವ 4, ರಾಣೆಬೆನ್ನೂರ 3 ಮತ್ತು ಬ್ಯಾಡಗಿಯಲ್ಲಿ ಒಂದು ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ. ಈವರೆಗೆ 56 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಪ್ರಕರಣದಲ್ಲಿ ಇಬ್ಬರು ಲ್ಯಾಬ್ ಟೆಕ್ನಿಷಿಯನ್, ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆ ವೈದ್ಯ ಸೇರಿದಂತೆ 4 ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.