ಕರ್ನಾಟಕ

karnataka

ETV Bharat / state

ಹಾವೇರಿ: ಶುಕ್ರವಾರದವರೆಗೆ 19 ಕೊರೊನಾ ಪ್ರಕರಣಗಳು ದೃಢ - Haveri corona cases

ಹಾವೇರಿ ಜಿಲ್ಲೆಯಲ್ಲಿ ಇಂದಿನವರೆಗೂ 19 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಆರು ಜನ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್-19 ಆಸ್ಪತ್ರೆ
ಕೋವಿಡ್-19 ಆಸ್ಪತ್ರೆ

By

Published : Jun 5, 2020, 11:21 PM IST

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರದವರೆಗೆ 19 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 19 ಪ್ರಕರಣಗಳಲ್ಲಿ, 13 ಸಕ್ರೀಯವಾಗಿದ್ದು ಆರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮುಂಬೈಯಿಂದ ಬಂದ ಮೂರು ಕುಟುಂಬಗಳ 10 ಸದಸ್ಯರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪತ್ತೆಯಾದ 19 ಪ್ರಕರಣಗಳ ಮೂಲ ಮುಂಬೈ, ಮಹಾರಾಷ್ಟ್ರವಾಗಿದೆ.

ಹಾವೇರಿ ಕೋವಿಡ್-19 ಆಸ್ಪತ್ರೆ

ಕೋವಿಡ್-19 ಆಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ. ಎಲ್ಲರೂ ಗುಣಮುಖರಾಗುತ್ತಿದ್ದು, ಈಗಾಗಲೇ ಹಲವು ಜನರ ವರದಿ ನೆಗೆಟಿವ್ ಬಂದಿದೆ. ಇನ್ನೊಮ್ಮೆ ಆರೋಗ್ಯ ಪರಿಶೀಲನೆ ನಡೆಸಿ ವರದಿ ನೆಗೆಟಿವ್ ಬಂದರೆ ಬಿಡುಗಡೆ ಮಾಡುವ ಇಂಗಿತವನ್ನ ವೈದ್ಯಾಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ಮತ್ತು ಆರೋಗ್ಯ ಇಲಾಖೆ ನಿರ್ದೇಶನದ ಮೇಲೆ ಸೋಂಕಿತರನ್ನ ಗುಣಮುಖರಾಗುತ್ತಿದ್ದಂತೆ ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆಯಾದವರನ್ನ ಮನೆಯಲ್ಲಿ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತೆ. ಅಲ್ಲದೇ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡರೇ ವೈದ್ಯರನ್ನ ಕಾಣುವಂತೆ ಸೂಚಿಸಲಾಗುತ್ತೆದೆ ಎಂದು ಅವರು ತಿಳಿಸಿದ್ದಾರೆ.

ಹಾವೇರಿ ಕೋವಿಡ್-19 ಆಸ್ಪತ್ರೆ

ABOUT THE AUTHOR

...view details