ಹಾವೇರಿ:ಜಿಲ್ಲೆಯ ಹಿರೇಕೆರೂರ ಪಟ್ಟಣದ ದುರ್ಗಾದೇವಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹ ಪತ್ತೆಯಾಗಿದೆ.
ಹಾವೇರಿ: ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆ - ಹಾವೇರಿ ಕೆರೆಯಲ್ಲಿ ಕೊಚ್ಚಿಒ ಹೋಗಿದ್ದ ಬಾಲಕನ ಮೃತದೇಹ ಪತ್ತೆ
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ 14 ವರ್ಷದ ಸೋಯೆಬ್ ರಾಣೇಬೆನ್ನೂರ ಬಾಲಕನ ಮೃತ ದೇಹ ಪತ್ತೆಯಾಗಿದೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸೋಯೆಬ್ ಶವ ಪತ್ತೆ
ಸೋಯೆಬ್(14) ಶವವಾಗಿ ಪತ್ತೆಯಾದ ಬಾಲಕ. ಅಗ್ನಿಶಾಮಕ ದಳ, ಹರಿಹರದ ಮುಳುಗು ತಜ್ಞರು ಮತ್ತು ಸ್ಥಳೀಯರು ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಇಂದು (ಅ.23) ಬೆಳಗ್ಗೆ ಬಾಲಕ ಕೊಚ್ಚಿ ಹೋಗಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬೆಳೆದ ಮುಳ್ಳುಗಂಟಿಗೆ ಮೃತದೇಹ ಸಿಲುಕಿ, ಮೇಲೆ ಬಂದಿತ್ತು.
ಧಾರಾಕಾರವಾಗಿ ಸುರಿದ ಮಳೆಯಿಂದ, ತುಂಬಿ ಹರಿಯುತಿದ್ದ ಕಾಲುವೆ ನೋಡಲು ಸೋಯೆಬ್ ಗೆಳೆಯರ ಜೊತೆ ಹೋಗಿದ್ದ, ಆ ವೇಳೆ ದುರ್ಘಟನೆ ನಡೆದಿತ್ತು. ಹಿರೇಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Last Updated : Oct 23, 2019, 12:52 PM IST