ಹಾವೇರಿ: ದೆಹಲಿಗೆ ತೆರಳಿ ವಾಪಸ್ಸಾದ ಹಾವೇರಿ ಜಿಲ್ಲೆಯ 12 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಆರೋಗ್ಯ ಇಲಾಖೆ ನಿನ್ನೆ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಿತ್ತು. ಇದೀಗ ಈ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು ಎಲ್ಲವೂ ನೆಗಟಿವ್ ಆಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಆತಂಕ ದೂರವಾಗಿದೆ.
ಹಾವೇರಿಯಿಂದ ದೆಹಲಿಗೆ ಹೋಗಿದ್ದ 12 ಜನರ ವರದಿ ನೆಗೆಟಿವ್ - ದೆಹಲಿಗೆ ಹೋಗಿದ್ದ ಹಾವೇರಿಯ 12 ಜನರ ವರದಿ ನೆಗೆಟಿವ್
ಹಾವೇರಿಯಿಂದ ದೆಹಲಿಗೆ ತೆರಳಿದ್ದ 12 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ ಎಂದು ಹಾವೇರಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ರಾಜೇಂದ್ರ ದೊಡ್ಡಮನಿ
ಕೊರೊನಾ ಸೋಂಕು ಹರಡೋ ಭೀತಿ ಎದುರಾದ ನಂತರ ಜಿಲ್ಲಾ ಆರೋಗ್ಯ ಇಲಾಖೆ ಈವರೆಗೆ ದೆಹಲಿ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಹೋಗಿ ಬಂದಿದ್ದ ಒಟ್ಟು 34 ಜನರ ತ್ರೋಟ್ ಮತ್ತು ರಕ್ತದ ಮಾದರಿಗಳನ್ನು ಶಿವಮೊಗ್ಗ ಲ್ಯಾಬ್‌ಗೆ ಕಳಿಸಿತ್ತು. ಈವರೆಗೆ ಕಳುಹಿಸಿದ್ದ ಎಲ್ಲ ಸ್ಯಾಂಪಲ್‌ಗಳ ವರದಿಯೂ ನೆಗೆಟಿವ್ ಆಗಿದೆ.