ಹಾವೇರಿ: ಸರ್ಕಾರ ನಮಗೆ 5 ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿರುವುದು ಸಂತಸ ತಂದಿದೆ ಅಂತ ಕ್ಷೌರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರದ 5 ಸಾವಿರ ರೂಪಾಯಿ ಸಹಾಯಧನಕ್ಕೆ ಹಾವೇರಿ ಕ್ಷೌರಿಕರ ಸಂತಸ - ಸವಿತ ಸಮಾಜ ಸಂಘ
ಲಾಕ್ಡೌನ್ ಜಾರಿಯಾದ ಬಳಿಕ ಆಟೋ ಚಾಲಕರು ಹಾಗೂ ಕ್ಷೌರಿಕರು ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷೌರಿಕರಿಗೆ ಸಹಾಯಧನವಾಗಿ 5 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಹಾವೇರಿಯ ಕ್ಷೌರಿಕರು ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರದ 5 ಸಾವಿರ ರೂಪಾಯಿ ಸಹಾಯ ಧನಕ್ಕೆ ಹಾವೇರಿ ಕ್ಷೌರಿಕರ ಸಂತಸ
ಲಾಕ್ಡೌನ್ ವೇಳೆ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರಿಂದ ಅದಾಯವಿಲ್ಲದಂತಾಗಿದೆ. ಬಾಡಿಗೆ ಕಟ್ಟಲು ಹಣವಿರಲಿಲ್ಲ. ಸರ್ಕಾರದ ಈ ನಿರ್ಧಾರದಿಂದ ನಮ್ಮ ಆರ್ಥಿಕ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ ಎಂದು ನಿರಾಳರಾದರು.
ಇದೇ ವೇಳೆ ಸರ್ಕಾರ ನಮಗೆ ಮೆಡಿಕಲ್ ಕಿಟ್ ವಿತರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕ್ಷೌರಿಕರು ತಿಳಿಸಿದ್ದಾರೆ. ಹಾವೇರಿಯಲ್ಲಿ ಹಡಪದ ಅಪ್ಪಣ್ಣ ಸಮಾಜ ಮತ್ತು ಸವಿತಾ ಸಮಾಜದ 50 ಸಾವಿರ ಜನರಿದ್ದಾರೆ. ಸಿಎಂ ಯಡಿಯೂರಪ್ಪನವರ ಈ ಕಾರ್ಯ ಕೊಂಚ ನೆಮ್ಮದಿ ನೀಡಿದಂತಾಗಿದೆ ಎಂದು ಕ್ಷೌರಿಕರು ಸಂತಸ ವ್ಯಕ್ತಪಡಿಸಿದ್ದಾರೆ.