ಹಾನಗಲ್: ತಾಲೂಕಿನ ಮಂಜುನಾಥ ನಿಲಗುಂದ್ ಎಂಬ ಯುವಕನಿಗೆ ರಾಜ್ಯ ಯುವ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ ಪಟ್ಟ ನೀಡಲಾಗಿದೆ.
ಹಾನಗಲ್ ಯುವಕನಿಗೆ ರಾಜ್ಯ ಯುವ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ ಪಟ್ಟ - Manjunatha Nilagund
ಹಾನಗಲ್ ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ಮಂಜುನಾಥ ನಿಲಗುಂದ್ಗೆ ರಾಜ್ಯ ಯುವ ಕಾಂಗ್ರೆಸ್ನ ಜಂಟಿ ಕಾರ್ಯದರ್ಶಿ ಪಟ್ಟ ದೊರಕಿದೆ.
ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ಮಂಜುನಾಥ ನಿಲಗುಂದ್ಗೆ ರಾಜ್ಯ ಯುವ ಕಾಂಗ್ರೆಸ್ ಪಟ್ಟ ದೊರಕಿರುವುದು ಸಂತಸ ತಂದಿದೆ ಎಂದು ತಾಲೂಕಿನ ಯುವಕರು ಸಂತಸ ಹಂಚಿಕೊಂಡರು. ಕಾಂಗ್ರೆಸ್ ಪಕ್ಷ ಹಗಲಿರುಳು ದುಡಿಯುವ ಯುವಕರನ್ನು ಮತ್ತು ತಳಹಂತದ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡಿ ಜವಾಬ್ದಾರಿ ಹೆಚ್ಚಿಸುತ್ತಿರುವುದು ಸಂತಸ ತಂದಿದೆ ಎಂದು ಮಂಜುನಾಥ ನಿಲಗುಂದ್ ಹೇಳಿದರು.
ಪಕ್ಷ ಸಂಘಟನೆಯ ಈ ಜವಾಬ್ದಾರಿ ಮತ್ತು ಈ ಪಟ್ಟ ನನಗೆ ಮಾತ್ರ ಸಿಕ್ಕಿಲ್ಲ. ಇದು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ದೊರೆತ ಪಟ್ಟವಾಗಿದೆ. ನಮ್ಮನ್ನು ಪಕ್ಷದ ಸಂಘಟನೆಗೆ ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದೆ ಎಂದು ತಿಳಿಸಿದರು.