ಹಾವೇರಿ:ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.
ಪಿಎಸ್ಐ ವಿರುದ್ಧ ಹಲ್ಲೆ ಆರೋಪ... ಗೃಹ ಸಚಿವರಿಗೆ ಯುವಕನಿಂದ ದೂರು - hamsabhavi psi asaults a boy news
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆ ಪಿಎಸ್ಐ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೋರ್ವ ಆರೋಪ ಮಾಡಿದ್ದಾರೆ.
ಪಿಎಸ್ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ
ಕಳೆದ ರಾತ್ರಿ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪಿಎಸ್ಐ ಡಿಪ್-ಡಿಮ್ ನೀಡಲಿಲ್ಲ. ಹೀಗಾಗಿ ಬೈಕ್ನಲ್ಲಿದ್ದ ಯುವಕ ಗುಂಡಿಗೆ ಬಿದ್ದಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ, ಯುವಕ ಹರೀಶ್ಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಾನು ಹಂಸಭಾವಿ ಪಿಎಸ್ಐ, ನನಗೆ ಡಿಪ್-ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ್ ಆರೋಪಿಸಿದ್ದಾರೆ. ಅಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated : Nov 16, 2019, 9:41 PM IST