ಕರ್ನಾಟಕ

karnataka

ETV Bharat / state

ರಾಜಭವನದಲ್ಲಿ ರಾಷ್ಟ್ರಪತಿ ಪದಕ ಸ್ವೀಕರಿಸಿದ ಹಲಗೇರಿ ಠಾಣೆ ಪಿಎಸ್ಐ ಕೆ.ಸಿ.ಕೋಮಲಾಚಾರ್ಯ - ರಾಷ್ಟ್ರಪತಿ ಪದಕ ಸ್ವೀಕರಿಸಿದ ಹಲಗೇರಿ ಠಾಣೆ ಪಿಎಸ್ಐ ಕೆಸಿ ಕೋಮಲಾಚಾರ್ಯ

ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹಲಗೇರಿ ಠಾಣೆಯ ಪಿಎಸ್ಐ ಕೆ.ಸಿ.ಕೋಮಲಾಚಾರ್ಯ ಅವರು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಸಿಎಂರಿಂದ ರಾಷ್ಟ್ರಪತಿ ಪದಕ ಸ್ವಿಕರಿಸಿದರು.

ರಾಜಭವನದಲ್ಲಿ ರಾಷ್ಟ್ರಪತಿ ಪದಕ ಸ್ವೀಕರಿಸಿದ ಹಲಗೇರಿ ಠಾಣೆ ಪಿಎಸ್ಐ ಕೆಸಿ ಕೋಮಲಾಚಾರ್ಯ
Halageri police station PSI Komalachary received President's Medal

By

Published : Jan 7, 2021, 8:31 PM IST

ರಾಣೇಬೆನ್ನೂರು/ಬೆಂಗಳೂರು : 2018ರಲ್ಲಿ ರಾಷ್ಟ್ರಪತಿ ಶ್ಲಾಘನೀಯ ಪದಕಕ್ಕೆ ಆಯ್ಕೆಯಾಗಿದ್ದ ಹಲಗೇರಿ ಠಾಣೆಯ ಪಿಎಸ್ಐ ಕೆ.ಸಿ.ಕೋಮಲಾಚಾರ್ಯ ಇಂದು ಬೆಂಗಳೂರಿನಲ್ಲಿ ಪದಕ ಸ್ವೀಕಾರ ಮಾಡಿದರು.

ರಾಜಭವನದಲ್ಲಿ ರಾಷ್ಟ್ರಪತಿ ಪದಕ ಸ್ವೀಕರಿಸಿದ ಹಲಗೇರಿ ಠಾಣೆ ಪಿಎಸ್ಐ ಕೆಸಿ ಕೋಮಲಾಚಾರ್ಯ

ಪೊಲೀಸ್​ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಕೆ.ಸಿ.ಕೋಮಲಾಚಾರ್ಯ ಅವರು ರಾಷ್ಟ್ರಪತಿಯವರು 2018 ರಲ್ಲಿ ಶ್ಲಾಘನೀಯ ಪದಕಕ್ಕೆ ಭಾಜನರಾಗಿದ್ದರು. ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ‌ರಾಜ್ಯಪಾಲರಾದ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರ ಮೂಲಕ ಪದಕ ಸ್ವೀಕಾರ ಮಾಡಿದರು.

ಓದಿ: ಬಿಎಸ್​ವೈ ಕೆಳಗಿಳಿಸಲು ಹೈಕಮಾಂಡ್ ಹಿಂದೇಟು: ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಇಲ್ಲಿದೆ!

ಕೆ.ಸಿ.ಕೋಮಲಾಚಾರ್ಯ ಅವರ ಶ್ರಮದಿಂದ ಕೊಲೆ, ದರೋಡೆ, ‌ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗಿ, ಅಪರಾಧಿಗಳಿಗೆ ಶಿಕ್ಷೆಯಾಗಿರುತ್ತದೆ. ಅಲ್ಲದೆ 2011ರಲ್ಲಿ ನಡೆದ ಪ್ರಕರಣದಲ್ಲಿ ಇವರು ನಾಲ್ಕು ಜನ ಆರೋಪಿಗಳನ್ನು ಸೆರೆ ಹಿಡಿದು, ಅವರ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕಿ ಅವರಿಗೆ ಜೀವಾವಧಿ ಶಿಕ್ಷೆ ನೀಡಿಸಲು ಕಾರಣರಾಗಿದ್ದರು.

For All Latest Updates

TAGGED:

ABOUT THE AUTHOR

...view details