ಕರ್ನಾಟಕ

karnataka

ETV Bharat / state

ಶಿಗ್ಗಾವಿಯಲ್ಲಿ ಮನೆಯ ಮುಂದಿದ್ದ ಹಗೆವು ಕುಸಿತ: ಸಿಲುಕಿ ನರಳಾಡಿದ ಎತ್ತು! - ಶಿಗ್ಗಾವಿ ಪೊಲೀಸ್ ಠಾಣೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮದಲ್ಲಿ ಚನ್ನಬಸನಗೌಡ ಎಂಬುವವರಿಗೆ ಸೇರಿದ ಹಗೆವು ಕುಸಿತವಾಗಿದೆ. ಈ ಹಗೆವು ಕುಸಿತವಾದ ಸಂದರ್ಭದಲ್ಲಿ ಎತ್ತೊಂದು ಅದರೊಳಗೆ ಸಿಕ್ಕಿಹಾಕಿಕೊಂಡಿದೆ.

ಮನೆಯ ಮುಂದಿದ್ದ ಹಗೆವು ಕುಸಿತ

By

Published : Oct 22, 2019, 8:41 PM IST

ಹಾವೇರಿ: ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮದಲ್ಲಿ ಮನೆಯ ಮುಂದಿದ್ದ ಹಗೆವು ಕುಸಿತವಾಗಿದೆ.

ಚನ್ನಬಸನಗೌಡ ಎಂಬುವವರಿಗೆ ಸೇರಿದ ಹಗೆವು ಕುಸಿತವಾದ ಸಂದರ್ಭದಲ್ಲಿ ಎತ್ತೊಂದು ಸಿಕ್ಕಿಹಾಕಿಕೊಂಡಿದೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹಗೆಯಲ್ಲಿ ಸಿಲುಕಿದ್ದ ಎತ್ತನ್ನ ಹೊರತೆಗೆದಿದ್ದಾರೆ.

ಹಗೆಯಲ್ಲಿ ಸಿಕ್ಕಿಕೊಂಡ ಎತ್ತು

ಹಗೆಯಲ್ಲಿ ಸಿಕ್ಕ ಎತ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಹಗೆವು ನಿರ್ಮಿಸಲಾಗಿತ್ತು.

ABOUT THE AUTHOR

...view details