ರಾಣೆಬೆನ್ನೂರು :ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನತೆ ತತ್ತರಿಸಿದ್ದಾರೆ.
ಮೂರು ದಿನದಿಂದ ಧಾರಾಕಾರ ಮಳೆ: ನಲುಗಿದ ರಾಣೆಬೆನ್ನೂರು ಜನ - ಜನತೆ ತತ್ತರ
ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ರಸ್ತೆಗಳೆಲ್ಲ ಹದಗೆಟ್ಟಿವೆ. ನಗರದ ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗಿದ್ದು, ಮನೆಯೊಳಗೆ ನೀರು ನುಗ್ಗುತ್ತಿದೆ.
ರಾಜಕಾಲುವೆ ಒತ್ತುವರಿ ಆರೋಪ:
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ ಎನ್ನಲಾಗುತ್ತಿದ್ದು, ಮಳೆಗಾಲದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಸಂಬಂಧ ಪಟ್ಟ ಅಧಿಕಾರಿಗಳು ಪರಿಹಾರ ಕೊಡಬೇಕೆಂಬುದು ಜನರ ಆಗ್ರಹವಾಗಿದೆ.