ಹಾವೇರಿ:ಜಿಲ್ಲೆಯಾದ್ಯಂತ ಗುರುಪೂರ್ಣಿಮೆಯನ್ನ ಸಡಗರ ಸಂಭ್ರಮದಿಂದ ಆಚರಿದ್ದು, ಹುಕ್ಕೇರಿಮಠದ ಸದಾಶಿವ ಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು.
ಹಾವೇರಿ ಜಿಲ್ಲೆಯಾದ್ಯಂತ ಗುರುಪೂರ್ಣಿಮೆ ಆಚರಣೆ - undefined
ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು.
ಗುರುಪೂರ್ಣಿಮೆ ಆಚರಣೆ
ಮುಂಜಾನೆಯಿಂದಲೇ ಶ್ರೀಗಳಿಗೆ ಬಿಲ್ವಪತ್ರೆ ಹಾರ ಹಾಕಿ ಸರತಿಯಂತೆ ಪಾದಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಕ್ತರು ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಅಂತಾ ಹಿರಿಯರೇ ಹೇಳಿದ್ದಾರೆ. ಗುರು ಪೂರ್ಣಿಮೆಯಂದು ಸಮಾಜದ ಗುರುಗಳ ಪಾದಪೂಜೆ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಗುರು ಪೂರ್ಣಿಮೆ ಅಂಗವಾಗಿ ಮಠದ ಲಿಂಗೈಕ್ಯ ಶಿವಲಿಂಗಶ್ರೀ ಮತ್ತು ಶಿವಬಸವಶ್ರೀಗಳ ಗದ್ದುಗೆಯನ್ನ ಪುಷ್ಪಗಳಿಂದ ಅಲಂಕರಿಸಲಾಗಿತ್ತು.